Uttarpradesh: ವಿದ್ಯಾರ್ಥಿಗೆ ಥಳಿಸಿ, ಕಾಲು ಮುರಿದು 200 ರೂ. ಚಿಕಿತ್ಸೆಗೆ ನೀಡಿದ ಶಿಕ್ಷಕ

U.P: ವಿದ್ಯಾರ್ಥಿಯೋರ್ವ ತಾನು ಕೇಳಿದ ಪ್ರಶ್ನೆಗೆ ಸರಿಯಾಗಿ ಉತ್ತರ ನೀಡಲಿಲ್ಲ ಎನ್ನುವ ಕಾರಣಕ್ಕೆ ಮನಬಂದಂತೆ ಥಳಿಸಿ ವಿದ್ಯಾರ್ಥಿಯ ಕಾಲನ್ನು ಮುರಿದಿದ್ದಾನೆ ಶಿಕ್ಷಕ. ಈ ಘಟನೆ ನಡೆದಿರುವುದು ಉತ್ತರ ಪ್ರದೇಶದ ಹರ್ದೋಯ್ ಜಿಲ್ಲೆಯಲ್ಲಿ. ಫೆ.22 ರಂದು ಖಾಸಗಿ ಶಾಲೆಯ ಶಿಕ್ಷಕ ಹರ್ಷಿತ್ ತಿವಾರಿ ಪ್ರಶ್ನೆಯೊಂದನ್ನು ಕೇಳಿದ್ದು, ಅದಕ್ಕೆ ವಿದ್ಯಾರ್ಥಿ ಉತ್ತರ ನೀಡಿರಲಿಲ್ಲ.

ಇದಕ್ಕೆ ಕೋಪಗೊಂಡ ಶಿಕ್ಷಕ ಮನಬಂದಂತೆ ವಿದ್ಯಾರ್ಥಿಯನ್ನು ಥಳಿಸಿದ್ದಾನೆ. ಗಂಭೀರ ಗಾಯಗೊಂಡ ವಿದ್ಯಾರ್ಥಿಯ ಕಾಲು ಮುರಿತಕ್ಕೊಳಗಾಗಿದೆ. ಆಸ್ಪತ್ರೆಗೆ ದಾಖಲಾದ ವಿದ್ಯಾರ್ಥಿಯ ಕಾಲು ಮುರಿತದ ಜೊತೆಗೆ ಶ್ರವಣ ದೋಷ ಉಂಟಾಗಿದೆ ಎಂದು ವೈದ್ಯರು ಹೇಳಿದ್ದಾರೆ.
ವಿದ್ಯಾರ್ಥಿಯ ಚಿಕಿತ್ಸೆಗೆ ಸಹಾಯ ಮಾಡುವಂತೆ ಪೋಷಕರು ಶಿಕ್ಷಕನ ಬಳಿಗೆ ಹೋದಾಗ ರೂ.200 ನೀಡಿ ಕಳುಹಿಸಿದ್ದಾನೆ. ಪೋಷಕರು ಸಿಟ್ಟುಗೊಂಡಿದ್ದು, ಶಿಕ್ಷಕನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಪೊಲೀಸರು ನಡೆಸಿದ ತನಿಖೆಯಲ್ಲಿ ಶಿಕ್ಷಕ ಹಲ್ಲೆ ಮಾಡಿರುವುದು ಕಂಡು ಬಂದಿದ್ದು, ಶಿಕ್ಷಕನ ಬಂಧನವಾಗಿದೆ.
Comments are closed.