Land Scam: ರಾಹುಲ್ ಆಪ್ತ ಪಿತ್ರೋಡಾ ವಿರುದ್ಧ ಬೃಹತ್ ಭೂ ಹಗರಣ ಆರೋಪ

Land Scam: ರಾಹುಲ್ ಗಾಂಧಿ ಆಪ್ತ ಹಾಗೂ ಕಾಂಗ್ರೆಸ್ ಪಕ್ಷದ ಸಾಗರೋತ್ತರ ಘಟಕದ ಅಧ್ಯಕ್ಷ ಸ್ಯಾನ್ ಪಿತ್ರೋಡಾ ಅವರು ಬೃಹತ್ ಭೂ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪ ಮಾಡಿ ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಅವರು ಲೋಕಾಯುಕ್ತ ಮತ್ತು ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಿದ್ದಾರೆ.

ಕಳೆದ 14 ವರ್ಷಗಳಿಂದ ಕರ್ನಾಟಕದ ರಾಜ್ಯ ಅರಣ್ಯ ಇಲಾಖೆಯ ಸುಮಾರು 150 ಕೋಟಿ ರೂಪಾಯಿಗಳಿಗೂ ಹೆಚ್ಚಿನ ಸರಕಾರಿ ಸ್ವತ್ತನ್ನು ಸ್ಯಾಮ್ ಪಿತ್ರೋಡಾ ಕಾನೂನು ಬಾಹಿರವಾಗಿ ತಮ್ಮ ಸ್ವಾಧೀನದಲ್ಲಿಕೊಂಡು ಕೋಟಿಗಟ್ಟಲೆ ಹಣ ಈ ಮೂಲಕ ಗಳಿಸುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
Comments are closed.