PM Modi: ಬೊಜ್ಜು ಕಡಿಮೆ ಮಾಡಲು ಜನತೆಗೆ ಪರಿಹಾರ ಸೂಚಿಸಿದ ಪ್ರಧಾನಿ ಮೋದಿ!!

Share the Article

PM Modi: ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯ ಮಂಕಿ ಬಾತ್ ಕಾರ್ಯಕ್ರಮದಲ್ಲಿ ಮೋದಿ ಅವರು ಜನರಲ್ಲಿ ಹೆಚ್ಚುತ್ತಿರುವ ಬೊಜ್ಜು ಸಮಸ್ಯೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಇದಕ್ಕೆ ಪರಿಹಾರಗಳನ್ನು ಕೂಡ ನೀಡಿದ್ದಾರೆ.

 

ಹೌದು, ಪ್ರತಿ 8 ಮಂದಿಯಲ್ಲಿ ಒಬ್ಬರಿಗೆ ಬೊಜ್ಜಿನ ಸಮಸ್ಯೆ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಮನ್​ ಕಿ ಬಾತ್​ನಲ್ಲಿ ಕಳವಳ ವ್ಯಕ್ತಪಡಿಸಿದ್ದು ಮಕ್ಕಳಲ್ಲಿ ಬೊಜ್ಜಿನ ಸಮಸ್ಯೆ ನಾಲ್ಕು ಪಟ್ಟು ಹೆಚ್ಚಾಗಿದೆ. ನೀವು ಸಣ್ಣ ಸಣ್ಣ ಪ್ರಯತ್ನಗಲಿಂದಲೇ ಬೊಜ್ಜು ಸಮಸ್ಯೆ ನಿವಾರಿಸಬಹುದು. ಮೊದಲು ಆಹಾರದಲ್ಲಿ ಕಡಿಮೆ ಪ್ರಮಾಣದ ಎಣ್ಣೆ ಬಳಸುವಂತೆ ಅವರು ಜನರಿಗೆ ಸಲಹೆ ನೀಡಿದ್ದಾರೆ.

 

ಅಲ್ಲದೆ ಅಧ್ಯಯನವೊಂದರ ಪ್ರಕಾರ ಎಂಟು ಜನರಲ್ಲಿ ಒಬ್ಬರು ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕಳೆದ ವರ್ಷಗಳಲ್ಲಿ ಸ್ಥೂಲಕಾಯದ ಪ್ರಕರಣಗಳು ದ್ವಿಗುಣಗೊಂಡಿವೆ. ನ್ನೂ ಹೆಚ್ಚು ಆತಂಕಕಾರಿ ಸಂಗತಿಯೆಂದರೆ ಸ್ಥೂಲಕಾಯದ ಸಮಸ್ಯೆ ಮಕ್ಕಳಲ್ಲಿ ನಾಲ್ಕು ಪಟ್ಟು ಹೆಚ್ಚಾಗಿದೆ. 2022ರ ವಿಶ್ವ ಆರೋಗ್ಯ ಸಂಸ್ಥೆ ದತ್ತಾಂಶದ ಪ್ರಕಾರ ವಿಶ್ವದಾದ್ಯಂತ ಸುಮಾರು 250 ಕೋಟಿ ಜನರು ಅಧಿಕ ತೂಕವನ್ನು ಹೊಂದಿರುವುದನ್ನು ತೋರಿಸುತ್ತದೆ. ಅಂದರೆ ಅವರು ಅಗತ್ಯಕ್ಕಿಂತ ಹೆಚ್ಚು ತೂಕವನ್ನು ಹೊಂದಿದ್ದಾರೆ. ಅಧಿಕ ತೂಕ ಅಥವಾ ಬೊಜ್ಜು ಅನೇಕ ರೀತಿಯ ಸಮಸ್ಯೆಗಳು ಮತ್ತು ರೋಗಗಳಿಗೆ ಕಾರಣವಾಗುತ್ತದೆ. ಸಣ್ಣ ಪ್ರಯತ್ನಗಳಿಂದ ಈ ಸವಾಲನ್ನು ನಿಭಾಯಿಸಬಹುದು ಎಂದು ಮೋದಿ ಹೇಳಿದರು.

 

ಮೋದಿ ನೀಡಿದ ಸಲಹೆ ಏನು?

ನೀವು ಆಹಾರದಲ್ಲಿ ಬಳಕೆ ಮಾಡುವ ಎಣ್ಣೆಯ ಪ್ರಮಾಣವನ್ನು ಶೇ. 10ರಷ್ಟು ಕಡಿಮೆ ಮಾಡಿ, ನೀವು ಅಡುಗೆ ಎಣ್ಣೆಯನ್ನು ಕೊಂಡುಕೊಳ್ಳುವಾಗಲೇ ಶೇ.10ರಷ್ಟು ಕಡಿಮೆ ಕೊಂಡುಕೊಳ್ಳಿ ಎಂದು ಸಲಹೆ ನೀಡಿದರು. 10 ಜನರು ಈ ಒಂದು ಮಾರ್ಗವನ್ನು ಅನುಸರಿಸಿ ಆ ಹತ್ತು ಜನರಲ್ಲಿ ಒಬ್ಬಬ್ಬರೂ 10 ಜನರಿಗೆ ಮಾರ್ಗದರ್ಶನ ನೀಡಿ ಎಂದು ಹೇಳಿದ್ದಾರೆ.

Comments are closed.