RTO: ಖಾಸಗಿ ಶಾಲಾ ವಾಹನಗಳಿಗೆ ಬಿಸಿ ಮುಟ್ಟಿಸಿದ ಆರ್‌ಟಿಓ: ನೂರಕ್ಕೂ ಹೆಚ್ಚು ಶಾಲಾ ಬಸ್ ಸೀಜ್

RTO: ಆರ್‌ಟಿಓ (RTO) ಅಧಿಕಾರಿಗಳು ಬೆಂಗಳೂರಿನಲ್ಲಿ ನೂರಕ್ಕೂ ಹೆಚ್ಚು ಶಾಲಾ ವಾಹನಗಳನ್ನು ಸೀಜ್ ಮಾಡಿದ್ದಾರೆ.

ಮಕ್ಕಳನ್ನು ಚಾಲಕರು ಬೇಕಾಬಿಟ್ಟಿಯಾಗಿ ಕೂರಿಸಿಕೊಂಡು ಹೋಗುತ್ತಿದ್ದರಲ್ಲದೆ, ವಾಹನಗಳ ಪರವಾನಿಗೆ, ಚಾಲಕರೂ ಪರವಾನಿಗೆ ಇಲ್ಲದೆ ಸಂಚರಿಸುತ್ತಿದ್ದರು. ಈ ಬಗ್ಗೆ ಕಾರ್ಯಾಚರಣೆ ನಡೆಸಿದ ಆರ್‌ಟಿಓ ಅಧಿಕಾರಿಗಳು ಪ್ರಮುಖ ಶಾಲಾ, ಕಾಲೇಜು ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.
ಅಲ್ಲದೇ ಶಾಲಾ ವಾಹನಗಳು ಶಾಲೆಯ ಹೆಸರಿನಲ್ಲಿ ನೋಂದಣಿ ಆಗಿರಬೇಕು ಆದರೆ ಸಾಕಷ್ಟು ವಾಹನಗಳು ಯಾರದೋ ಹೆಸರಿನಲ್ಲಿ ನೋಂದಣಿ ಆಗಿವೆ ಎಂದು ತಿಳಿದುಬಂದಿದೆ.
Comments are closed.