Singer Udit Narayan: ಗಾಯಕ ಉದಿತ್‌ ನಾರಾಯಣ್‌ ಮೇಲೆ ಕೇಸು ದಾಖಲು

Share the Article

Singer Udit Narayan: ತನ್ನ ಕಿಸ್‌ ಮೂಲಕ ಭಾರೀ ವೈರಲ್‌ ಆಗಿದ್ದ ಉದಿತ್‌ ನಾರಾಯಣ್‌ ಮೇಲೆ ಇದೀಗ ಅವರ ಮೊದಲ ಪತ್ನಿ ರಂಹನಾ ಝಾ ಅವರು ಜೀವನಾಂಶ ಪ್ರಕರಣವನ್ನು ದಾಖಲು ಮಾಡಿದ್ದಾರೆ.

ತಮ್ಮ ಹಕ್ಕುಗಳ ಉಲ್ಲಂಘನೆ ಮಾಡಿ ಆಸ್ತಿಯನ್ನು ಕಬಳಿಸಿದ್ದಾರೆ ಎಂದು ರಂಜನಾ ಆರೋಪ ಮಾಡಿದ್ದಾರೆ. ಉದಿತ್‌ ನಾರಾಯಣ್‌ ಫೆ.21 ರಂದು ಕೌಟುಂಬಿಕ ನ್ಯಾಯಾಲಯಕ್ಕೆ ವಿಚಾರಣೆ ಹಾಜರಾಗಿದ್ದು, ತಮ್ಮ ನಿರ್ಧಾರದಲ್ಲಿ ಯಾವುದೇ ಇತ್ಯರ್ಥಕ್ಕೆ ಸಿದ್ಧರಿಲ್ಲ ಎಂದು ಹೇಳಿದ್ದಾರೆ.

 

ರಂಜನಾ ಅವರಿಗೆ ಉದಿತ್‌ ತಿಂಗಳಿಗೆ 15000 ನೀಡುತ್ತಿದ್ದರು, ನಂತರ ಅದನ್ನು 2021ರಲ್ಲಿ 25 ಸಾವಿರ ರೂಪಾಯಿಗೆ ಏರಿಕೆ ಮಾಡಲಾಯಿತು. ಅಲ್ಲದೆ ಒಂದು ಕೋಟಿ ರೂಪಾಯಿ ಮೌಲ್ಯದ ಭೂಮಿ ಹಾಗೂ ಮನೆಯನ್ನು ಉದಿತ್‌ ರಂಜನಾಗೆ ನೀಡಿದ್ದರು. 25 ಲಕ್ಷ ಬೆಲೆಯ ಜ್ಯುವೆಲ್ಲರಿಗಳನ್ನು ನೀಡಲಾಗಿತ್ತು. ಇದನ್ನೆಲ್ಲ ರಂಜನಾ ಮಾರಿಕೊಂಡಿದ್ದರು ಎನ್ನಲಾಗಿದೆ.

 

ರಂಜನಾ ಹೇಳಿರುವ ಪ್ರಕಾರ, ಜಮೀನು ಮಾರಾಟದಿಂದ ಬಂದ 18 ಲಕ್ಷ ಹಣವನ್ನು ಉದಿತ್‌ ಇಟ್ಟುಕೊಂಡಿದ್ದಾರೆ. ನಾನು ಮುಂಬೈಗೆ ಬಂದಾಗಲೆಲ್ಲಾ ಬೆದರಿಕೆ ಹಾಕುತ್ತಾರೆ ಎಂದು ಆರೋಪ ಮಾಡಿದ್ದಾರೆ.

Comments are closed.