Mangaluru: ತಲಪ್ಪಾಡಿ ಟೋಲ್ ಗೇಟ್ ವಿರುದ್ದ ಪರ್ಯಾಯ ರಸ್ತೆ ನಿರ್ಮಾಣ!

Share the Article

Mangaluru: ಕರ್ನಾಟಕ – ಕೇರಳ ಸಂಗಮ ಭೂಮಿ ತಲಪ್ಪಾಡಿ. ಗಡಿನಾಡ ಜನತೆಯ ದೈನಂದಿನ ಬದುಕಿಗೆ ತಲಪ್ಪಾಡಿ ಟೋಲ್ ಗೇಟ್ ಕಂಟಕವಾಗಿ ಪರಿಣಮಿಸಿದೆ. ಹೌದು, ಕೇರಳದ ಮಂಜೇಶ್ವರ ಪಂಚಾಯಿತಿ ವ್ಯಾಪ್ತಿಯ ಗಡಿನಾಡ ಕನ್ನಡಿಗರಿಗೆ ತಲಪಾಡಿ ಟೋಲ್ ಗೇಟ್ ನಲ್ಲಿ ವಿನಾಯಿತಿ ನೀಡುವಂತೆ ಹಲವು ಸಮಯಗಳಿಂದ ಬೇಡಿಕೆ ಇದ್ದರೂ ಟೋಲ್ ಸಂಸ್ಥೆಗಳು ಸ್ಪಂದಿಸಿಲ್ಲ. ಇದನ್ನು ಖಂಡಿಸಿ, ಬೇಡಿಕೆಗಳಿಗೆ ಸ್ಪಂದನೆ ಸಿಗದೇ ಹೋದುದರಿಂದ ಗಡಿನಾಡ ಮಂಜೇಶ್ವರದವರು “ಪರ್ಯಾಯ” ಮಾರ್ಗದತ್ತ ಸಾಗಿದ್ದಾರೆ.

 

ತಲಪಾಡಿ ಟೋಲ್‌ ಗೇಟ್‌ ಸ್ಥಾಪಿಸಿದ ಆರಂಭದಲ್ಲಿ ಕರ್ನಾಟಕ ಮತ್ತು ಕೇರಳ ಭಾಗದ ಐದು ಕಿ.ಮೀ ವ್ಯಾಪ್ತಿಯ ಸ್ಥಳೀಯರಿಗೆ ಟೋಲ್‌ನಲ್ಲಿ ವಿನಾಯಿತಿ ನೀಡಲಾಗುತ್ತಿತ್ತು. ಬಳಿಕ ಕೇರಳ ಭಾಗದ ಜನರಿಗೆ ವಿನಾಯಿತಿ ರದ್ದು ಮಾಡಿತ್ತು. ಇದನ್ನು ಖಂಡಿಸಿ ಸರ್ವಪಕ್ಷಗಳು ಹಾಗೂ ಸಮಾನ ಮನಸ್ಕರ ನೇತೃತ್ವದ ಮಂಜೇಶ್ವರ ಟೋಲ್ ಗೇಟ್ ಕ್ರಿಯಾಸಮಿತಿ ರಚಿಸಿ ಹೋರಾಟ ನಡೆಸಲಾಗಿತ್ತು.

 

ಮಂಜೇಶ್ವರ ಆಡಳಿತಾತ್ಮಕವಾಗಿ ಕೇರಳದಲ್ಲಿ ಇದ್ದರೂ ಈ ಭಾಗದ ಜನರು ಉದ್ಯೋ ಗ, ಶಿಕ್ಷಣಕ್ಕೆ ಮಂಗಳೂರನ್ನೇ (Mangaluru) ಆಶ್ರಯಿಸಿದ್ದಾರೆ. ಆದರೆ, ನಿತ್ಯ ಇಲ್ಲಿ ಟೋಲ್‌ ಪಾವತಿಸಿ ಬರುವ ಅನಿವಾರ್ಯತೆಯಿಂದ ಅವರಿಗೆ ಸಂಕಷ್ಟ ಉಂಟಾಗಿದೆ. ಹೀಗಾಗಿ ಹಲವು ಬಾರಿ ಮಂಜೇಶ್ವರ ಗ್ರಾ.ಪಂ ವ್ಯಾಪ್ತಿಯ ನಾಗರಿಕರು ಮತ್ತು ಹೋರಾಟ ಸಮಿತಿ ಮನವಿ ಮಾಡಿದರೂ ಟೋಲ್ ಗೇಟ್‌ ಸಂಸ್ಥೆ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸ್ಪಂದಿಸಿಲ್ಲ. ಹೀಗಾಗಿ ಗಡಿನಾಡ ಜನರು ಪರ್ಯಾಯ ರಸ್ತೆ ನಿರ್ಮಾಣದ ಯೋಜನೆ ರೂಪಿಸಿದ್ದಾರೆ. ಪ್ರತ್ಯೇಕ ರಸ್ತೆ ನಿರ್ಮಾಣಕ್ಕೆ ಮುಂದಾಗಿರುವ ಮಂಜೇಶ್ವರ ಗ್ರಾಮ ಪಂಚಾಯಿತಿಯ ನಿಲುವನ್ನು ಕರ್ನಾಟಕದ ತಲಪಾಡಿ ಹಾಗೂ ಸೋಮೇಶ್ವರ ಪಂಚಾಯಿತಿಗಳು ಬೆಂಬಲಿಸಿವೆ.

Comments are closed.