Udupi: ಕೊರಗಜ್ಜನಿಗೆ ಹರಕೆ ರೂಪದಲ್ಲಿ ನೀಡಿದ ಮದ್ಯದ ಬಾಟಲು ಕದಿಯಲೆತ್ನಿಸಿದ ಯುವಕನಿಗೆ ಏಟು

Udupi: ನಗರದ ನೆಲ್ಲಿಕಟ್ಟೆಯಲ್ಲಿರುವ ಬಬ್ಬು ಸ್ವಾಮಿ ಹಾಗೂ ಪರಿವಾರ ದೈವಗಳ ಸನ್ನಿಧಿಯಲ್ಲಿ ಕೊರಗಜ್ಜನಿಗೆ ಸಮರ್ಪಿಸಿದ ಮದ್ಯವನ್ನು ಕದಿಯಲೆತ್ನಿಸಿದ ಯುವಕನಿಗೆ ಭಕ್ತರು ಧರ್ಮದೇಟು ನೀಡಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.

ದೇವಸ್ಥಾನದ ವಾರ್ಷಿಕ ನೇಮೋತ್ಸವ ಶನಿವಾರ ರಾತ್ರಿ ಆಯೋಜನೆ ಮಾಡಲಾಗಿತ್ತು. ಸಾವಿರಾರು ಮಂದಿ ಭಕ್ತರು ಕೊರಗಜ್ಜನ ಸನ್ನಿಧಿಯಲ್ಲಿ ಸಂಪ್ರದಾಯದ ಪ್ರಕಾರ ಮದ್ಯದ ಬಾಟಲುಗಳನ್ನು ಹರಕೆ ರೂಪದಲ್ಲಿ ನೀಡುತ್ತಿದ್ದರು. ಈ ಸಂದರ್ಭದಲ್ಲಿ ಕುಡುಕ ಯುವಕನೋರ್ವ ಬಾಟಲಿ ಎಗರಿಸಲು ಮಾಡಿದ್ದನ್ನು ಗಮನಿಸಿದ ಕೆಲವು ಯುವಕನಿಗೆ ಗದರಿಸಿದ್ದಾರೆ. ಯುವಕ ಕೂಡಲೇ ಮದ್ಯದ ಬಾಟಲಿಯನ್ನು ಅಲ್ಲೇ ಬಿಟ್ಟು ಪರಾರಿಯಾಗಲೆತ್ನಿಸಿದ. ಈ ಯುವಕ ಇದೇ ರೀತಿ ಹಲವು ಕಡೆ ಕಳ್ಳತನ ಮಾಡುತ್ತಿದ್ದ ಎನ್ನಲಾಗಿದೆ. ಇದೀಗ ಅದೇ ಚಾಳಿಯನ್ನು ಮುಂದುವರೆಸಲೆತ್ನಿಸಿದಾಗ ರೆಡ್‌ಹ್ಯಾಂಡಾಗಿ ಜನರ ಕೈಗೆ ಸಿಕ್ಕಿದ್ದಾನೆ.
ಯುವಕನಿಗೆ ಎರಡೇಟು ಹೊಡೆಯುವ ದೃಶ್ಯದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Comments are closed.