YouTube: ಯೂಟ್ಯೂಬ್ ಚಾನೆಲ್ ಸ್ಟುಡಿಯೋಗೆ ಭೇಟಿ ಕೊಟ್ಟ ಪೊಲೀಸರಿಗೆ ಕಾದಿತ್ತು ಬಿಗ್ ಶಾಕ್!

Share the Article

YouTube: ಆಂಧ್ರ ಪ್ರದೇಶದ ವಿಜಯವಾಡದಲ್ಲಿ ಹೆಸರಿಗಷ್ಟೇ ಅದೊಂದು ಯೂಟ್ಯೂಬ್ (YouTube) ಚಾನೆಲ್, ಆದ್ರೆ ಚಾನೆಲ್ ಸೋಗಿನಲ್ಲಿ ಸ್ಪಾ ಸೆಂಟ‌ರ್ ನಡೆಸುತ್ತಿದ್ದರು.

ಯೂಟ್ಯೂಬ್ ಚಾನೆಲ್ ಸ್ಟುಡಿಯೋ ಒಳಗೆ ಸ್ಪಾ ಸೆಂಟರ್ ನಡೆಸುತ್ತಿದ್ದು, ಅನೈತಿಕ ಚಟುವಟಿಕೆಗಳು ಎಗ್ಗಿಲ್ಲದೆ ನಡೆಯುತ್ತಿವೆ ಎಂಬ ದೂರುಗಳು ಬಂದ ಬೆನ್ನಲ್ಲೇ ಮಾಚವರಂ ಸಿಐ ಪ್ರಕಾಶ್ ಅವರು ತಮ್ಮ ಸಹೋದ್ಯೋಗಿಗಳೊಂದಿಗೆ ವೆಟರ್ನರಿ ಕಾಲೋನಿ ಸರ್ವಿಸ್ ರಸ್ತೆಯಲ್ಲಿರುವ ಸ್ಟುಡಿಯೋ 9 (ಸ್ಪಾ) ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಅಸಲಿ ಸತ್ಯ ಗೊತ್ತಾಗಿ ಪೊಲೀಸರಿಗೆ ಶಾಕ್ ಆಗಿದೆ.

ಆರೋಪಿಗಳು ಎಪಿ 23 ಹೆಸರಿನಲ್ಲಿ ಯೂಟ್ಯೂಬ್ ನ್ಯೂಸ್ ಚಾನೆಲ್ ನಡೆಸುತ್ತಿರುವುದಾಗಿ ಹೇಳಿದ್ದರು. ಆದರೆ, ಒಳಗೆ ಸ್ಪಾ ಸೆಂಟರ್ ಮೂಲಕ ಅಕ್ರಮ ಚಟುವಟಿಕೆಗಳಲ್ಲಿ ತೊಡದಿದ್ದರು. ದಾಳಿಯ ವೇಳೆ 10 ಮಹಿಳೆಯರು ಮತ್ತು 13 ಪುರುಷರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಎಲ್ಲಾ ಮಹಿಳೆಯರು ಬೇರೆ ರಾಜ್ಯಗಳಿಗೆ ಸೇರಿದವರು ಎಂದು ಗುರುತಿಸಲಾಗಿದೆ.

ಯೂಟ್ಯೂಬ್ ಚಾನೆಲ್ ಹೆಸರಿನಲ್ಲಿ ಚಲಸಾನಿ ಪ್ರಸನ್ನ ಭಾರ್ಗವ್ ಎಂಬಾತ ಸ್ಪಾ ಸೆಂಟ‌ರ್ ನಡೆಸುತ್ತಿದ್ದ ಎಂದು ಪೊಲೀಸರು ಗುರುತಿಸಿದ್ದಾರೆ. ಸದ್ಯ ಭಾರ್ಗವ್ ತಲೆಮರೆಸಿಕೊಂಡಿದ್ದಾನೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆತನಿಗಾಗಿ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.

Comments are closed.