Ian Chappell: ಕ್ರಿಕೆಟ್ ಬರಹಗಳಿಗೆ ಅಂತಿಮ ವಿದಾಯ ಹೇಳಿದ ಚಾಪೆಲ್

Ian Chappell: ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಇಯಾನ್ ಚಾಪೆಲ್ ಕಳೆದ ಐದು ದಶಕಗಳ ಕ್ರಿಕೆಟ್ ಕುರಿತ ಅಂಕಣ ಬರಹಗಳಿಗೆ ತಮ್ಮ ಪೂರ್ಣ ವಿರಾಮವನ್ನು ನೀಡಿದ್ದಾರೆ. ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ ನಂತರ ಅದರ ಒಳನೋಟ, ವಿಮರ್ಶೆ ಕುರಿತು ಬರೆಯುತ್ತ ಬಂದಿದ್ದ ಇಯಾನ್ ಚಾಪೆಲ್ ʼಇಎಸ್‌ಪಿಎನ್‌ಕ್ರಿಕ್‌ಇನ್ಫೋʼ ದಲ್ಲಿ ತಮ್ಮ ಕೊನೆಯ ಅಂಕಣವನ್ನು ಪ್ರಕಟ ಮಾಡಿದ್ದಾರೆ.

ಸಚಿನ್ ತೆಂಡುಲ್ಕರ್ ಮತ್ತು ಸ್ಪಿನ್ ಮಾತ್ರಿಕ ಶೇನ್ ವಾರ್ನ್ ಅವರ 1998 ರ ಚೆನ್ನೈ ಟೆಸ್, ವಿವಿಎಸ್ ಲಕ್ಷ್ಮಣ್ 281 ರನ್ ಬಾರಿಸಿದ 2001 ರ ಕೋಲ್ಕತ್ತ ಟೆಸ್ಟ್ ಪಂದ್ಯಗಳು, ಬ್ರಿಯಾನ್ ಲಾರ ಮತ್ತು ರಿಕಿ ಪಾಂಟಿಂಗ್ ಇನಿಂಗ್ಸ್ ಕುರಿತ ಬರಹಗಳು ಸ್ಮರಣೀಯ ಎಂದು ಬರೆದಿದ್ದಾರೆ. 50 ವರ್ಷಗಳಿಂದ ಬರೆಯುತ್ತ ಬಂದಿರುವೆ. ಇದು ನನ್ನ ಕೊನೆಯ ಅಂಕಣ ಎಂದು ಪತ್ರಿಕೋದ್ಯಮದಿಂದ ನಿವೃತ್ತಿ ಹೊಂದುವ ಕುರಿತು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.
ಪುಲಿಟ್ಜರ್ ಪ್ರಶಸ್ತಿ ವಿಜೇತ ಅಮೆರಿಕದ ಕ್ರೀಡಾ ಬರಹಗಾರ ವಾಲ್ಟರ್ ವೆಲ್ಲೆಸ್ಪೆ ರೆಡ್ ಸ್ಮಿತ್ ತನ್ನ ಬರಹಗಳ ಮೇಲೆ ಗಣನೀಯ ಪ್ರಭಾವವನ್ನು ಬೀರಿದ್ದಾರೆ ಎಂದು ಚಾಪೆಲ್ ಬರೆದಿದ್ದಾರೆ.
Comments are closed.