Ramzan Relief :ದಸರಾ ಹಬ್ಬಕ್ಕೆ 10-15 ದಿನ ರಜೆ ಕೊಡುತ್ತೀರಿ, ನಾವೇನಾದ್ರೂ ಪ್ರಶ್ನೆ ಮಾಡಿದ್ದೇವಾ? ಹಾಗೆ ರಂಜಾನ್‌ಗೂ 1 ಗಂಟೆ ರಿಲೀಫ್ ಕೊಡಿ- ಸಿಎಂಗೆ ಹುಸೇನ್ ಮನವಿ!!

Share the Article

Ramzan Relief:ರಂಜಾನ್ ಹಬ್ಬಕ್ಕಾಗಿ ಮುಸ್ಲಿಂ ಸರ್ಕಾರಿ ನೌಕರರಿಗೆ ಒಂದು ಗಂಟೆ ರಿಲೀಫ್ ಕೊಡುವಂತಹ ವಿಚಾರ ರಾಜ್ಯಾದ್ಯಂತ ಬಾರಿ ಚರ್ಚೆಯಾಗುತ್ತಿದೆ. ತೆಲಂಗಾಣ ಸರ್ಕಾರ ಈ ನಡೆಯನ್ನು ಅನುಸರಿಸಿದ ಬಳಿಕ ಕರ್ನಾಟಕದಲ್ಲೂ ಕೂಡ ಈ ಕೂಗು ಕೇಳಿ ಬರುತ್ತದೆ. ಈ ಬೆನ್ನಲ್ಲೇ ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಹುಸೇನ್ ಅವರು ದಸರಾ ಹಬ್ಬಕ್ಕೆ 10- 15 ದಿನ ರಜೆ ಕೊಡುತ್ತೀರಿ. ನಾವೇನಾದರೂ ಇದನ್ನು ಪ್ರಶ್ನೆ ಮಾಡಿದ್ದೇವಾ? ಹಾಗೆ ರಂಜಾನ್ ಗೂ ಮುಸ್ಲಿಂ ನೌಕರರಿಗೆ ಒಂದು ಗಂಟೆ ರಿಲೀಫ್ ಕೊಡಿ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.

ಹೌದು, ಈ ಕುರಿತಾಗಿ ರಂಜಾನ್ ತಿಂಗಳಲ್ಲಿ ಉಪವಾಸ ಬಿಡೋಕೆ 1 ಗಂಟೆ ಮುಂಚಿತವಾಗಿ ಮುಸ್ಲಿಂ ಸಮುದಾಯದ ಸರ್ಕಾರಿ ನೌಕರರಿಗೆ ಮನೆಗೆ ತೆರಳಲು ಅವಕಾಶ ನೀಡಿ ಎಂದು ಕೋರಿ ಸಿಎಂ ರಾಜಕೀಯ ಕಾರ್ಯದರ್ಶಿ ನಜೀರ್‌ಗೆ ಪತ್ರ ಬರೆದಿದ್ದಾರೆ. ಕೊಡಲೇಬೇಕು ಎಂಬ ಒತ್ತಾಯ, ಒತ್ತಡ ಇಲ್ಲ. ಆದರೆ ತೆಲಂಗಾಣ ಸರ್ಕಾರದವರು ಅವರಾಗಿಯೇ ಕೊಟ್ಟಿರೋದಕ್ಕೆ ನಾವು ಇಲ್ಲಿ ಕೇಳುತ್ತಿದ್ದೇವೆ ಅಷ್ಟೇ. ದಸರಾಗೆ 10-15 ದಿನ ರಜೆ ಕೊಡ್ತಾರೆ. ಶಿವರಾತ್ರಿಗೆ ರಜೆ ಕೊಡ್ತಾರೆ. ಅದಕ್ಕೆ ನಾವೇನು ತಗಾದೆ ತೆಗೆದಿಲ್ವಲ್ಲ. ಅಕಸ್ಮಾತ್ ಸರ್ಕಾರ ಒಂದು ಗಂಟೆ ಮುಂಚಿತವಾಗಿ ತೆರಳಲು ಅವಕಾಶ ಮಾಡಿಕೊಡದಿದ್ದರೆ ನಮಗೇನು ಬೇಸರ ಇಲ್ಲ ಎಂದಿದ್ದಾರೆ.

ಅಲ್ಲದೆ ನಮಗೆ ಸರ್ಕಾರ ಅವಕಾಶ ಮಾಡಿಕೊಡಲೇಬೇಕು ಅಂತ ಹೇಳ್ತಿಲ್ಲ. ಸರ್ಕಾರ ಅವಕಾಶ ಮಾಡಿಕೊಟ್ಟರೆ ಸಂತೋಷ. ನಾನು ನಮ್ಮ ಸಮುದಾಯದ ಯಾವುದೇ ನಾಯಕರ ಜೊತೆ ಚರ್ಚೆ ಮಾಡಿಲ್ಲ ಎಂದು ಸಿಎಂಗೆ ಪತ್ರ ಬರೆದಿದ್ದೇವೆ. ಸಿಎಂ ಅವರ ರಾಜಕೀಯ ಕಾರ್ಯದರ್ಶಿ ನಜೀರ್ ಅಹಮ್ಮದ್ ಅವರಿಗೆ ಪತ್ರ ಬರೆದಿದ್ದೇವೆ.

Comments are closed.