Mann Ki Baat: ಕರ್ನಾಟಕದ ಹುಲಿ ವೇಷ ಕುಣಿತಕ್ಕೆ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಧಾನಿ ಮೋದಿ

Share the Article

Mann Ki Baat: 119 ನೇ ಮನ್‌ ಕಿ ಬಾತ್‌ ಸಂಚಿಕೆ ರವಿವಾರ ಪ್ರಸಾರವಾಗಿದ್ದು, ಪ್ರಧಾನಿ ಮೋದಿಯವರು ಹಲವು ವಿಷಯಗಳನ್ನು ಹಂಚಿಕೊಂಡರು. ಇದರಲ್ಲಿ ರಾಜ್ಯದ ಜನಪದ ಕಲೆಯಾಗಿರುವ “ಹುಲಿ ವೇಷ ಕುಣಿತ”ವನ್ನು ಉಲ್ಲೇಖಿಸಿದ್ದಾರೆ. ಜೊತೆಗೆ ಹುಲಿ ವೇಷ ಹಾಕುವವರನ್ನು ಹಾಡಿ ಹೊಗಳಿದ್ದಾರೆ.

“ಕರ್ನಾಟಕ, ಕೇರಳ ಮತ್ತು ತಮಿಳುನಾಡಿನಲ್ಲಿ ಹುಲಿವೇಷ ತೊಟ್ಟು ಕುಣಿತದ ದೃಶ್ಯ ನಿಜಕ್ಕೂ ಸೊಬಗು. ಇದು ವಿಶೇಷ ಕಾರ್ಯಕ್ರಮವಾಗಿದೆ. ಕರ್ನಾಟಕದ ಚಾಮರಾಜನಗರ ಜಿಲ್ಲೆಯಲ್ಲಿ ಬಿಆರ್‌ಟಿ ಅರಣ್ಯವಿದ್ದು, ಅಲ್ಲಿ ಅತಿ ಹೆಚ್ಚು ಹುಲಿಗಳಿವೆ. ಹುಲಿಗಳನ್ನು ಉಳಿಸುವಲ್ಲಿ ಸ್ಥಳೀಯ ಸೋಲಿಗರ ಪಾತ್ರ ಬಹಳ ಮುಖ್ಯವಾಗಿದೆ. ಇದರ ಕ್ರೆಡಿಟ್‌ ಎಲ್ಲ ಸ್ಥಳೀಯ ಸೋಲಿಗರಿಗೆ ಸಲ್ಲಬೇಕು, ಪ್ರಾಣಿ-ಮಾನವನ ಸಂಘರ್ಷ ನಡೆಯುತ್ತಲೇ ಇರುತ್ತದೆ. ಇದರ ಜೊತೆಗೆ ಅದನ್ನು ಕಾಪಾಡಿಕೊಂಡು ಹೋಗಬೇಕು ಎಂದು ಮೋದಿ ಹೇಳಿದರು.

Comments are closed.