PU academic schedule : ಮುಂದಿನ ವರ್ಷದ ಪಿಯು ಶೈಕ್ಷಣಿಕ ವೇಳಾಪಟ್ಟಿ ಪ್ರಕಟ

Share the Article

PU academic schedule : ಪದವಿ ಪೂರ್ವ ಶಿಕ್ಷಣ ಇಲಾಖೆಯು ಮುಂದಿನ ಶೈಕ್ಷಣಿಕ ವರ್ಷ (2025-26)ದ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಜೂ.2 ರಿಂದ ಪ್ರಥಮ ಮತ್ತು ದ್ವಿತೀಯ ಪಿಯುಸಿ ತರಗತಿಗಳು ಆರಂಭವಾಗಲಿದೆ. ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾದ ಬಳಿಕದ ಮೊದಲ ಕಾರ್ಯನಿರತ ದಿನದಿಂದ ಪ್ರಥಮ ಪಿಯುಸಿ ದಾಖಲಾತಿ ಪ್ರಕ್ರಿಯೆ ಆರಂಭವಾಗಲಿದೆ.

ಮೇ 22ರಿಂದ ದ್ವಿತೀಯ ಪಿಯುಸಿ ದಾಖಲಾತಿ ಆರಂಭವಾಗಲಿವೆ. ಮೊದಲನೇ ಅವಧಿ ಜೂ.2ರಿಂದ ಸೆ.21ರವರೆಗೆ ಇರಲಿದ್ದು, ಎರಡನೇ ಅವಧಿ ಅಕ್ಟೋಬರ್ 8 ರಿಂದ 2026ರ ಮಾ.31ರವರೆಗೆ ನಡೆಯಲಿದೆ. ಮಧ್ಯಂತರ ರಜೆ ಸೆ.22 ರಿಂದ ಅ.7ರವರೆಗೆ ಇರಲಿದೆ. ಉಳಿದಂತೆ ಜೂ.16 ರಿಂದ ಪ್ರಾಯೋಗಿಕ ತರಗತಿಗಳು ಆರಂಭವಾಗಲಿದೆ. ಆಗಸ್ಟ್ 11ರಿಂದ 14ರವರೆಗೆ ಪ್ರಥಮ ಕಿರು ಪರೀಕ್ಷೆ ನಡೆಯಲಿವೆ.

ಇನ್ನು ಎರಡನೇ ಅವಧಿಯಲ್ಲಿ ಅಕ್ಟೋಬರ್ 9 ರಿಂದ 27ರವರೆಗೆ ಮಧ್ಯ ವಾರ್ಷಿಕ ಪರೀಕ್ಷೆ, ಡಿ. 19 ರಿಂದ 22 ಎರಡನೇ ಕಿರು ಪರೀಕ್ಷೆ, 2026ರ ಜ.2ರಿಂದ ಜ. 13ರವರೆಗೆ ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆಗಳು. ಜ.5ರಿಂದ 20ರವರೆಗೆ ದ್ವಿತೀಯ ಪಿಯು ಪೂರ್ವ ಸಿದ್ಧತಾ ಪರೀಕ್ಷೆಗಳು, ಜ, 21ರಿಂದ ಫೆ. 14 ರವರೆಗೆ ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆಗಳು, ಫೆ.10 ರಿಂದ 25ರವರೆಗೆ ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆಗಳು, ಫೆ.2ರಿಂದ /ಮಾ. 21 ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆಗಳು ಆರಂಭ, ಮಾ. 31 ಪ್ರಥಮ ಪಿಯುಸಿ ಫಲಿತಾಂಶ ಪ್ರಕಟಗೊಳ್ಳಲಿದೆ.

Comments are closed.