Indian Railway : ರೈಲ್ವೆ ಪ್ರಯಾಣಿಕರೇ ಗಮನಿಸಿ – ತತ್ಕಾಲ್ ಬುಕ್ಕಿಂಗ್ ನಲ್ಲಿ ಮಹತ್ವದ ಬದಲಾವಣೆ !!

Indian Railway : ಭಾರತೀಯ ರೈಲ್ವೆ ಇಲಾಖೆ ತನ್ನ ನಿಯಮಗಳಲ್ಲಿ ಕೆಲವು ಮಹತ್ವದ ಬದಲಾವಣೆಗಳನ್ನು ಮಾಡಿದೆ. ಅಂತಯೇ ತತ್ಕಾಲ್ ಟಿಕೆಟ್ ಬುಕ್ಕಿಂಗ್ ನಲ್ಲಿ ರಾತ್ರೋರಾತ್ರಿ ಬದಲಾವಣೆಯನ್ನು ಮಾಡಿ ಜಾರಿಗೊಳಿಸಿದೆ.

ಹೌದು, ಈ ವರ್ಷ ಭಾರತೀಯ ರೈಲ್ವೆ ತತ್ಕಾಲ್ ಟಿಕೆಟ್ ಬುಕಿಂಗ್ ನಿಯಮಗಳಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನ ಜಾರಿಗೆ ತಂದಿದೆ. ಈ ಮೊದಲು ತತ್ಕಾಲ್ ಟಿಕೆಟ್ ಬುಕಿಂಗ್ ಸಮಯ ಬೆಳಿಗ್ಗೆ 10:00 ಆಗಿತ್ತು. ಹೊಸ 2025ರ ತತ್ಕಾಲ್ ಟಿಕೆಟ್ ಬುಕಿಂಗ್ ನಿಯಮಗಳ ಪ್ರಕಾರ, ತತ್ಕಾಲ್ ಟಿಕೆಟ್ ಬುಕಿಂಗ್ ಈಗ ಬೆಳಿಗ್ಗೆ 11:00 ಗಂಟೆಗೆ ಪ್ರಾರಂಭವಾಗಲಿದೆ.
ಅಲ್ಲದೆ ತತ್ಕಾಲ್ ಟಿಕೆಟ್ ಬುಕಿಂಗ್’ಗೆ ಇನ್ಮುಂದೆ ಆಧಾರ್ ಕಾರ್ಡ್ ಕಡ್ಡಾಯ ಎಂದು ಐಆರ್ಸಿಟಿಸಿ ಘೋಷಿಸಿದೆ. ನಕಲಿ ಜನನ ಪ್ರಮಾಣಪತ್ರಗಳನ್ನ ಬಳಸಿಕೊಂಡು ಇತರರೊಂದಿಗೆ ಬುಕಿಂಗ್ ಮಾಡುವ ಘಟನೆಗಳನ್ನು ಕಡಿಮೆ ಮಾಡಲು ಈಗ ಆಧಾರ್ ಕಡ್ಡಾಯಗೊಳಿಸಲಾಗುತ್ತಿದೆ.
Comments are closed.