Trump: ಭಾರತದಲ್ಲಿ ಟೆಸ್ಲಾ ಘಟಕ ಸ್ಥಾಪನೆಗೆ ಡೊನಾಲ್ಡ್ ಟ್ರಂಪ್ ವಿರೋಧ.!!

Trump: ಭಾರತದಲ್ಲಿ ಟೆಸ್ಲಾ ವಿದ್ಯುತ್ಚಾಲಿತ ಕಾರು ತಯಾರಿಕಾ ಘಟಕವನ್ನು ಸ್ಥಾಪಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Trump) ವಿರೋಧ ವ್ಯಕ್ತಪಡಿಸಿದ್ದಾರೆ. ಈ ಯೋಜನೆ ‘ತುಂಬಾ ಅನ್ಯಾಯ’ ಎಂಬುದಾಗಿ ಟ್ರಂಪ್ ಹೇಳಿದ್ದಾರೆ.

ಎಲಾನ್ ಮಸ್ಕ್ ಜೊತೆ ಸಂದರ್ಶನದಲ್ಲಿ ಟ್ರಂಪ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು, “ವಿಶ್ವದ ಎಲ್ಲಾ ರಾಷ್ಟ್ರಗಳು ಅಮೆರಿಕದಿಂದ ಪ್ರಯೋಜನಗಳನ್ನು ಪಡೆದುಕೊಳ್ಳುತ್ತಿವೆ. ಆದರೆ, ನಮ್ಮ ಸರಕುಗಳ ಮೇಲೆ ಭಾರತ ಸೇರಿದಂತೆ ಕೆಲವು ದೇಶಗಳು ದುಬಾರಿ ಸುಂಕಗಳನ್ನು ವಿಧಿಸುತ್ತವೆ. ಇದಕ್ಕೆ ಪ್ರತಿಯಾಗಿ, ನಾವು ಕೂಡ ಅಷ್ಟೇ ಸುಂಕವನ್ನು ವಿಧಿಸುತ್ತೇವೆ” ಎಂದು ಅವರು ಹೇಳಿದರು. ಈ ಕುರಿತಂತೆ ಎಲಾನ್ ಮಸ್ಕ್ ಕೂಡ ಟ್ರಂಪ್ನ ಮಾತಿಗೆ “ಇದು ನ್ಯಾಯಯೋಚಿತ ನಿರ್ಧಾರ” ಎಂದು ಹೇಳಿದರು.
Comments are closed.