ರಾಜ್ಯದಲ್ಲಿ ಒಂಬತ್ತು ಕಳಪೆ ಇಂಜೆಕ್ಷನ್ ಪತ್ತೆ; ಪ್ರಯೋಗಾಲಯ ವರದಿ ಬಹಿರಂಗ

Injections: ಬಾಣಂತಿಯರ ಸರಣಿ ಸಾವು ಸಂಭವಿಸಿದ ಬೆನ್ನಲ್ಲೇ ಇದೀಗ ರಾಜ್ಯದಲ್ಲಿ ಬಳಕೆಯಲ್ಲಿರುವ 9 ಇಂಜೆಕ್ಷನ್‌ಗಳ ಗುಣಮಟ್ಟ ಹೊಂದಿಲ್ಲ ಎಂಬ ಆತಂಕಕಾರಿ ವಿಚಾರ ಪ್ರಯೋಗಾಲಯ ವರದಿಯಲ್ಲಿ ಬಹಿರಂಗಗೊಂಡಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ” ಗುಣಮಟ್ಟವಿಲ್ಲದ ಈ ಇಂಜೆಕ್ಷನ್‌ಗಳನ್ನು ಕೂಡಲೇ ಹಿಂತೆಗೆದುಕೊಳ್ಳುವಂತೆ ಕೇಂದ್ರ ಸರಕಾರವನ್ನು ಒತ್ತಾಯ ಮಾಡಿದ್ದಾರೆ. ಕಳಪೆ ಗುಣಮಟ್ಟದ ಔಷಧಗಳನ್ನು ಹಿಂಪಡೆದು ಜನರ ಆರೋಗ್ಯ ಕಾಪಾಡ ಬೇಕೆಂದು ಕೇಂದ್ರ ಸಚಿವ ನಡ್ಡ ಅವರಿಗೆ ಪತ್ರ ಬರೆದಿದ್ದಾರೆ.

ಜ.1 ರಿಂದ ಫೆ.16 ರ ನಡುವೆ ಹೊರ ರಾಜ್ಯಗಳಲ್ಲಿ ತಯಾರಾಗಿ ಕರ್ನಾಟಕಕ್ಕೆ ಪೂರೈಕೆಯಗಿರುವ ಔಷಧಗಳಲ್ಲಿ 9 ಇಂಜೆಕ್ಷನ್ ಯೋಗ್ಯವಲ್ಲ ಎಂದು ರಾಜ್ಯ ಸರಕಾರ ಪ್ರಯೋಗಾಲಯದಲ್ಲಿ ನಡೆದ ಗುಣಮಟ್ಟ ಪರೀಕ್ಷೆ ವರದಿಯಲ್ಲಿ ಸಾಬೀತಾಗಿರುವ ಕುರಿತು ವರದಿಯಾಗಿದೆ.
ಕಳಪೆ ಗುಣಮಟ್ಟದ 9 ಇಂಜೆಕ್ಷನ್‌ಗಳ ಪೈಕಿ ಎರಡು ಬ್ಯಾಚ್‌ನ ಇಂಜೆಕ್ಷನ್‌ಗಳು ಆಂಟಿಬಯೋಟಿಕ್ ಆಗಿದ್ದು, ವಾಂತಿ, ಭೇದಿ ಸಂದರ್ಭದಲ್ಲಿ ನೀಡಲಾಗುತ್ತದೆ. ಇದಲ್ಲದೆ ನೋವು ನಿವಾರಕವಾಗಿ ಬಳಲಿಕೆ, ನಿಶ್ಯಕ್ತಿಗೆ , ಕಿಡ್ನಿ ಸಮಸ್ಯೆ ಹೊಂದಿರುವವರಿಗೆ , ಹಾವು ಕಡಿತ, ವಿಷ ಸೇವನೆ ಸಂದರ್ಭದಲ್ಲಿ ಹಾಗೂ ಕ್ಯಾಲ್ಸಿಯಂ ಕೊರತೆ ಇಂಜೆಕ್ಷನ್ ಕೂಡಾ ಇದರಲ್ಲಿದೆ.
ಕಳಪೆ ಔಷಧಗಳ ಲಿಸ್ಟ್ ಈ ಕೆಳಗೆ ನೀಡಲಾಗಿದೆ;

Comments are closed.