Sunil Gavaskar: ಮಂಗಳೂರು ಏರ್ಪೋರ್ಟ್ಗೆ ಬಂದ ಸುನಿಲ್ ಗವಾಸ್ಕರ್

Mangalore: ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಂದು ಶುಕ್ರವಾರ (ಫೆ.21) ರಂದು ಕಾಣಿಸಿಕೊಂಡರು. ಕಾಸರಗೋಡಿನಲ್ಲಿ ನಗರಸಭಾ ಕ್ರೀಡಾಂಗಣಕ್ಕೆ ನಿರ್ಮಿಸಲಾದ ಅವರ ಹೆಸರಿನ ರಸ್ತೆ ಉದ್ಘಾಟನೆಗೆ ಆಗಮಿಸಿದ್ದು, ಕಾರು ಮೂಲಕ ಕಾಸರಗೋಡಿಗೆ ಅವರು ಹೋಗಿದ್ದಾರೆ.

ಕಾಸರಗೋಡು ವಿದ್ಯಾನಗರದ ಮುನ್ಸಿಪಲ್ ಕ್ರೀಡಾಂಗಣವನ್ನು ಸುತ್ತುವರೆದಿರುವ ಮುನ್ಸಿಪಲ್ ರಸ್ತೆಗೆ ಮರುನಾಮಕರಣ ಮಾಡುವ ಫಲಕವನ್ನು ಅವರು ಅನಾವರಣಗೊಳಿಸಲಿದ್ದಾರೆ. 1860 ಮೀಟರ್ ಉದ್ದ ರಸ್ತೆಯನ್ನು ಸುನಿಲ್ ಗವಾಸ್ಕರ್ ಮುನ್ಸಿಪಲ್ ಕ್ರೀಡಾಂಗಣ ರಸ್ತೆ ಎಂದು ಹೆಸರಿಡಲಾಗಿದೆ. ಇದು ಕಾಸರಗೋಡು ಜಿಲ್ಲೆಯಲ್ಲಿ ಕ್ರಿಕೆಟ್ ಆಟಗಾರನ ಹೆಸರಿನಲ್ಲಿ ಇರುವ ಎರಡನೇ ರಸ್ತೆಯಾಗಿದೆ. ಇನ್ನೊಂದು ಕುಂಬಳೆ ಗ್ರಾಮ ಪಂಚಾಯತ್ನಲ್ಲಿರುವ ರಸ್ತೆಯನ್ನು ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ ಹೆಸರಿಗೆ 2010 ರಲ್ಲಿ ಮಾಡಲಾಗಿತ್ತು.
Comments are closed.