Baba: ಕಾಲಿನ ಸ್ಪರ್ಶದಿಂದಲೇ ಕ್ಯಾನ್ಸರ್ ಸೇರಿ ಅನೇಕ ದೊಡ್ಡ ಖಾಯಿಲೆಗಳ ವಾಸಿ – ಕುಂಭಮೇಳದಲ್ಲಿ ಬಾಬಾನ ಚಮತ್ಕಾರ ವೈರಲ್!!

Baba: ಕುಂಭಮೇಳದ ಸಂದರ್ಭದಲ್ಲಿ ನಾವು ವಿವಿಧ ರೀತಿಯ, ವಿಶಿಷ್ಟ ರೀತಿಯ ಬಾಬಗಳನ್ನು ನೋಡಿದ್ದೇವೆ. ಇದರ ಬೆನ್ನಲ್ಲೇ ಇದೀಗ ಇನ್ನೊಬ್ಬ ಬಾಬಾ ತನ್ನ ಕಾಲಿನ ಸ್ಪರ್ಶ ದಿಂದಲೇ ಕ್ಯಾನ್ಸರ್ ಸೇರಿದಂತೆ ಎಲ್ಲಾ ರೀತಿಯ ಕಾಯಿಲೆಗಳನ್ನು ವಾಸಿ ಮಾಡುತ್ತೇನೆಂದು ಚಮತ್ಕಾರ ಮಾಡಿ ತೋರಿಸುತ್ತಿದ್ದಾರೆ.

ಹೌದು, ಅರ್ಥತ್ರಾನ ಎಂಬ ಹೆಸರಿನ ಬಾಬಾ, ಕ್ಯಾನ್ಸರ್ ಸೇರಿ ಎಲ್ಲಾ ಕಾಯಿಲೆಗಳನ್ನು ಕಾಲಿನಿಂದಲೇ ವಾಸಿ ಮಾಡುತ್ತಾರಂತೆ. ಹೀಗೆ ಬಾಬಾ ಅರ್ಥತ್ರಾನ ಬಗ್ಗೆ ತಿಳಿದ ಭಕ್ತರು, ಮಹಾ ಕುಂಭಮೇಳಕ್ಕೆ ಬಂದು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿ ನೇರವಾಗಿ ಇಲ್ಲಿಗೆ ಬಂದು ಆಶೀರ್ವಾದ ಪಡೆಯುತ್ತಿದ್ದಾರೆ.
ಬಾಬಾ ಅರ್ಥತ್ರಾನ ತಮ್ಮ ಪಾದ ಸ್ಪರ್ಶದ ಮೂಲಕ ಜನರ ಕಾಯಿಲೆಗೆ ಮುಕ್ತಿ ನೀಡುತ್ತಾರಂತೆ. ಈಗಾಗಲೇ ಹಲವರು ಬಾಬಾ ಬಳಿ ಆಶೀರ್ವಾದ ಪಡೆದು ಕಾಯಿಲೆ ಮತ್ತು ಇತರ ಸಮಸ್ಯೆಗಳಿಂದ ಮುಕ್ತರಾಗಿದ್ದಾರೆ ಎಂದು ಭಕ್ತರು ಹೇಳುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಸಂಬಂಧ ವಿಡಿಯೋಗಳು ವೈರಲ್ ಆಗುತ್ತಿವೆ.
Comments are closed.