Home News UP Budget 2025: ಜಾಣ ವಿದ್ಯಾರ್ಥಿನಿಯರಿಗೆ ಉಚಿತ ಸ್ಕೂಟಿ

UP Budget 2025: ಜಾಣ ವಿದ್ಯಾರ್ಥಿನಿಯರಿಗೆ ಉಚಿತ ಸ್ಕೂಟಿ

Hindu neighbor gifts plot of land

Hindu neighbour gifts land to Muslim journalist

UP Budget 2025: ಯುಪಿ ಹಣಕಾಸು ಸಚಿವ ಸುರೇಶ್ ಖನ್ನಾ ಅವರು 2025-26 ರ ಹಣಕಾಸು ವರ್ಷದ ವಾರ್ಷಿಕ ಬಜೆಟ್ ಅನ್ನು ಮಂಡಿಸಿದರು. ಈ ಬಜೆಟ್ ಉತ್ತರ ಪ್ರದೇಶದ ಇತಿಹಾಸದಲ್ಲಿಯೇ ಅತ್ಯಂತ ದೊಡ್ಡ ಬಜೆಟ್ ಎಂದು ಬಣ್ಣಿಸಲಾಗುತ್ತಿದೆ. ಯೋಗಿ ಸರ್ಕಾರ ಈ ಬಾರಿಯ ಬಜೆಟ್‌ನಲ್ಲಿ ಹಲವು ಮಹತ್ವದ ಘೋಷಣೆಗಳನ್ನು ಮಾಡಿದೆ. ಈ ಬಾರಿಯ ಬಜೆಟ್‌ನಲ್ಲಿ ಯೋಗಿ ಸರ್ಕಾರ ಮಹಿಳೆಯರಿಗಾಗಿ ಹಲವು ದೊಡ್ಡ ಘೋಷಣೆಗಳನ್ನು ಮಾಡಿದೆ.

ಬಜೆಟ್‌ನಲ್ಲಿ ಯೋಗಿ ಸರ್ಕಾರ ಉತ್ತರ ಪ್ರದೇಶದ ವಿದ್ಯಾರ್ಥಿನಿಯರಿಗಾಗಿ ದೊಡ್ಡ ಘೋಷಣೆ ಮಾಡಿದೆ. ಇದರ ಅಡಿಯಲ್ಲಿ ಉನ್ನತ ಶಿಕ್ಷಣ ಪಡೆಯುವ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ಉಚಿತ ಸ್ಕೂಟರ್ ನೀಡಲಾಗುವುದು. ಆದರೆ, ಅರ್ಹತೆಯ ಆಧಾರದ ಮೇಲೆ ವಿದ್ಯಾರ್ಥಿನಿಯರಿಗೆ ಸ್ಕೂಟ್‌ಗಳನ್ನು ನೀಡಲಾಗುವುದು. 12ನೇ ಫಲಿತಾಂಶದಲ್ಲಿ ಉತ್ತಮ ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ಸರಕಾರದಿಂದ ಉಚಿತ ಸ್ಕೂಟಿ ನೀಡಲಾಗುತ್ತದೆ. ಸ್ಕೂಟಿ ನೀಡುವ ಸ್ಕೀಂಗೆ ʼಮಹಾರಾಣಿ ಲಕ್ಷ್ಮೀಬಾಯಿ ಯೋಜನೆʼ ಎಂದು ಹೆಸರಿಡಲಾಗಿದೆ.

ಯುಪಿ ಬೋರ್ಡ್ ಅಲ್ಲದೆ ಸಿಬಿಎಸ್‌ಇ ಬೋರ್ಡ್ ಕೂಡ ಇದರಲ್ಲಿ ಸೇರಿಕೊಳ್ಳಲಿದೆ. ಇದಕ್ಕಾಗಿ 400 ಕೋಟಿ ಬಜೆಟ್‌ ನಿಗದಿಪಡಿಸಲಾಗಿದೆ. ಈ ಯೋಜನೆಯ ಮೂಲಕ ಸರ್ಕಾರವು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಬಯಸುತ್ತದೆ.

ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಬಾಲಕಿಯರ ವಸತಿ ನಿಲಯ ನಿರ್ಮಿಸುವುದಾಗಿಯೂ ಸರ್ಕಾರ ಬಜೆಟ್‌ನಲ್ಲಿ ಘೋಷಿಸಿದೆ. ಯೋಗಿ ಸರ್ಕಾರ ಈ ಬಾರಿಯ ಬಜೆಟ್‌ನಲ್ಲಿ ಮಹಿಳೆಯರ ಬಗ್ಗೆ ವಿಶೇಷ ಕಾಳಜಿ ವಹಿಸಿದೆ.

ಇದು ಮಾತ್ರವಲ್ಲದೇ ಮುಖ್ಯಮಂತ್ರಿ ಅವರು ಕನ್ಯಾ ಸುಮಂಗಲಾ ಯೋಜನೆಯಡಿ 700 ಕೋಟಿ ರೂ. ಪ್ರಸ್ತಾವನೆ ಕುರಿತು ಘೋಷಣೆ ಮಾಡಿದ್ದಾರೆ. ಇನ್ನೊಂದರೆ ಉಜ್ವಲಾ ಯೋಜನೆಯಡಿ ಎರಡು ಉಚಿತ ಎಲ್‌ಪಿಜಿ ಸಿಲಿಂಡರ್‌ಗಳನ್ನು ನೀಡುವುದಾಗಿಯೋ ಸರಕಾರ ಘೋಷಣೆ ಮಾಡಿದೆ.