Entertainment News: ʼವಿಷ್ಣು ಪ್ರಿಯಾʼ ಸಿನಿಮಾ ಪ್ರಚಾರಕ್ಕೆ ತೆರಳುತ್ತಿದ್ದ ಸಂದರ್ಭ ನಟ ಶ್ರೇಯಸ್‌ ಕಾರು ಅಪಘಾತ

Share the Article

Entertainment News: ನಟ ಶ್ರೇಯಸ್‌ ಮಂಜು ಅವರು ಪ್ರಯಾಣ ಮಾಡುತ್ತಿದ್ದ ಕಾರು ಅಪಘಾತಕ್ಕೀಡಾಗಿರುವ ಘಟನೆಯೊಂದು ಗುರುವಾರ (ಫೆ.20) ರಂದು ನಡೆದಿದೆ. ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್‌ ಕೆ.ಮಂಜು ಪ್ರಯಾಣ ಮಾಡುತ್ತಿದ್ದ ಕಾರು ದಾವಣಗೆರೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ.

ʼವಿಷ್ಣು ಪ್ರಿಯಾʼ ಪ್ರಮೋಷನ್‌ಗೆಂದು ಬೆಂಗಳೂರಿನಿಂದ ದಾವಣಗೆರೆಗೆ ಶ್ರೇಯಸ್‌ ತಮ್ಮ ಬಿಎಂಡಬ್ಲ್ಯೂ ಕಾರಿನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಶಿರಾ ಬಳಿ ಲಾರಿ ನಡುವೆ ಅಪಘಾತ ಸಂಭವಿಸಿದೆ. ಓವರ್‌ಟೇಕ್‌ ಮಾಡುವ ಭರದಲ್ಲಿ ಲಾರಿಯೊಂದು ಕಾರಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಕಾರಿನ ಮಿರರ್‌ ಮುರಿದಿದ್ದು, ಸಾಕಷ್ಟು ಡೆಂಟ್‌ ಆಗಿದೆ ಎನ್ನಲಾಗಿದೆ.

ಈ ಘಟನೆಯಲ್ಲಿ ನಟ ಶ್ರೇಯಸ್‌ಗೆ ಯಾವುದೇ ಗಾಯವಾಗಿಲ್ಲ. ಪೊಲೀಸರು ಸ್ಥಳಕ್ಕೆ ಬಂದಿದ್ದು, ಈ ಘಟನೆ ಕುರಿತು ನಟ ಶ್ರೇಯಸ್‌ರಿಂದ ಪೊಲೀಸರು ಮಾಹಿತಿ ಪಡೆದಿದ್ದಾರೆ. ಪೊಲೀಸರು ದೂರು ದಾಖಲು ಮಾಡಿಕೊಂಡಿದ್ದಾರೆ.

Comments are closed.