Kolkata: 7 ತಿಂಗಳ ಹಸುಗೂಸಿನ ಮೇಲೆ ಅತ್ಯಾಚಾರ; ಅತ್ಯಾಚಾರಿಗೆ ಗಲ್ಲು

Kolkata: ಕೋಲ್ಕತ್ತ ವಿಶೇಷ ನ್ಯಾಯಾಲಯವು, ಏಳು ತಿಂಗಳ ಹಸುಗೂಸಿನ ಮೇಲೆ ಅತ್ಯಾಚಾರ ಮಾಡಿದ ಕಾಮುಕ ರಾಜೀವ್ ಘೋಷ್ಗೆ ಗಲ್ಲು ಶಿಕ್ಷೆಯನ್ನು ವಿಧಿಸಿ, ಬುಧವಾರ ತೀರ್ಪು ಪ್ರಕಟ ಮಾಡಿದೆ.

ಹಾಲುಗಲ್ಲದ ಹಸುಳೆಯನ್ನು ಕದ್ದೊಯ್ದು ಲೈಂಗಿಕ ದೌರ್ಜನ್ಯ ನಡೆಸಿರುವುದು ಅತ್ಯಂತ ಕ್ರೌರ್ಯದ ನಡೆಯಾಗಿದೆ. ಈ ಅಪರಾಧ ಕೃತ್ಯ ಅಪರೂಪದಲ್ಲಿ ಅಪರೂಪದ್ದಾಗಿದೆ. ಹಾಗಾಗಿ ಅಪರಾಧಿಗೆ ಮರಣ ದಂಡನೆಯೇ ಸೂಕ್ತ ಶಿಕ್ಷೆ ಎಂದು ನ್ಯಾಯಾಧೀಶರು ಘೋಷಣೆ ಮಾಡಿದರು. ಅಲ್ಲದೆ ಮಗುವಿನ ಪೋಷಕರಿಗೆ ಪರಿಹಾರವಾಗಿ ರಾಜ್ಯ ಸರಕಾರ 10 ಲಕ್ಷ ರೂ. ನೀಡಬೇಕು ಎಂದು ಆದೇಶಿಸಿದರು.
ಪ್ರಕರಣದ ಹಿನ್ನೆಲೆ;
2024 ರ ನವೆಂಬರ್ನಲ್ಲಿ ಕೋಲ್ಕತ್ತಾದ ಬರ್ತೊಲ್ಲಾ ಪ್ರದೇಶದಲ್ಲಿ ರಸ್ತೆಬದಿಯೇ ಶೆಡ್ ಕಟ್ಟಿ ವಾಸವಾಗಿದ್ದ ದಂಪತಿಯ ಶಿಶುವೊಂದು ಕಾಣೆಯಾಗಿತ್ತು. ಕೆಲ ಗಂಟೆಗಳ ಬಳಿಕ ತೀವ್ರ ಗಾಯಗಳಾದ ಸ್ಥಿತಿಯಲ್ಲಿ ಶಿಶು ಫುಟ್ಪಾತ್ ಪಕ್ಕದಲ್ಲಿ ಮಲಗಿ ಅಳುತ್ತಿರುವುದು ಕಂಡು ಬಂದಿದೆ. ಚಿಕಿತ್ಸೆಗೆಂದು ಕರೆದುಕೊಂಡು ಹೋದಾಗ ಗುಪ್ತಾಂಗದಲ್ಲಿ ಗಾಯವಾಗಿರುವುದು ಕಂಡು ಬಂದಿದೆ. ಅತ್ಯಾಚಾರ ನಡೆದಿರುವುದು ದೃಢಪಟ್ಟಿತ್ತು. ನಂತರ ಪೊಲೀಸರು ರಾಜೀವ್ ಘೋಷ್ನನ್ನು ಬಂಧನ ಮಾಡಿದ್ದರು.
Comments are closed.