Suicide: ಮಿತ್ತಬಾಗಿಲು: ಪತಿ, ಅತ್ತೆ, ನಾದಿನಿಯಾರಿಂದ ದೈಹಿಕ ಮಾನಸಿಕ ಹಿಂಸೆ

Share the Article

Suicide: ಪತಿಯ ದೈಹಿಕ ಹಲ್ಲೆ ಮತ್ತು ಅತ್ತೆ, ನಾದಿನಿಯ ನಿರಂತರ ಮಾನಸಿಕ ಕಿರುಕುಳದಿಂದ ನೊಂದ ಮಹಿಳೆಯೊಬ್ಬರು ಇರುವೆ ನಿಯಂತ್ರಣಕ್ಕೆ ಉಪಯೋಗಿಸುವ ವಿಷಪದಾರ್ಥ ಸೇವಿಸಿ ಆತ್ಮಹತ್ಯೆಗೆ (Suicide) ಯತ್ನಿಸಿದ ಘಟನೆ ಎರ್ಮಾಳ್‌ಪಲ್ಕೆ ಎಂಬಲ್ಲಿ ನಡೆದಿದ್ದು, ಮಹಿಳೆ ಗಂಭೀರ ಸ್ಥಿತಿಯಲ್ಲಿ ಮಂಗಳೂರಿನ ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕಾಜೂರು ಜಿ.ನಗರ ನಿವಾಸಿ ಕೂಲಿ ಕಾರ್ಮಿಕ ಹಮೀದ್ ಅವರ ಪುತ್ರಿಯನ್ನು ಬೆಳ್ತಂಗಡಿ ತಾಲೂಕು ಮಿತ್ತಬಾಗಿಲು ಗ್ರಾಮದ ಎರ್ಮಾಳ್‌ಪಲ್ಕೆ ನಿವಾಸಿ ಫಾರೂಕ್ ಎಂಬಾತನಿಗೆ ಎರಡು ವರ್ಷಗಳ ಹಿಂದೆ ವಿವಾಹ ಮಾಡಿಕೊಡಲಾಗಿತ್ತು. ಆದರೆ ಆಕೆಗೆ ಅಲ್ಲಿ ಪತಿಯ ನಿರಂತರ ಮಾನಸಿಕ ದೈಹಿಕ ಕಿರುಕುಳ, ಅತ್ತೆ ಮತ್ತು ನಾದಿನಿಯ ಮಾನಸಿಕ ಹಿಂಸೆ ಅತಿಯಾಗಿ ಜೀವನದ ಭರವಸೆ ಕಳೆದುಕೊಳ್ಳುವಂತಾಗಿದೆ.

Comments are closed.