Crime: ‘ಅತ್ತೆ ಸಾಯಿಸಲು ಮಾತ್ರೆ ಕೊಡಿ’ ವೈದ್ಯರಿಗೆ ಮೆಸೇಜ್ ಮಾಡಿದ ಸೊಸೆ!!

Share the Article

Crime: ಸೊಸೆಯೊಬ್ಬಳು ಅತ್ತೆಯನ್ನು ಕೊಲ್ಲಲು ವೈದ್ಯರ ಬಳಿ ಮಾತ್ರೆ ಕೇಳಿದ ಘಟನೆ (Crime) ಬೆಂಗಳೂರಿನಲ್ಲಿ ನಡೆದಿದೆ. ಅತ್ತೆಯನ್ನು ಸಾಯಿಸಬೇಕು ಎಂದು ಬೆಂಗಳೂರಿನ ಡಾಕ್ಟರ್ ಸುನೀಲ್ ಕುಮಾರ್ ಎಂಬುವವರ ವಾಟ್ಸಪ್ ಸಂಪರ್ಕವನ್ನು ಮಹಿಳೆಯೊಬ್ಬಳು ಮಾಡಿದ್ದಾಳೆ.

ನನ್ನ ಅತ್ತೆಯಿಂದ ನನಗೆ ಹಿಂಸೆ ಆಗುತ್ತಿದೆ, ಅವರಿಗೆ ತುಂಬಾ ವಯಸ್ಸಾಗಿದೆ ಹೀಗಾಗಿ ಅವರನ್ನು ಹೇಗೆ ಸಾಯಿಸೋದು ಅಂತ ಎಂದು ವೈದ್ಯರಿಗೆ ಮೆಸೇಜ್ ಮಾಡಿದ್ದಾರೆ. ಜೊತೆಗೆ ಒಂದೆರಡು ಮಾತ್ರೆ ತಗೊಂಡ್ರೆ ಸಾಯುತ್ತಾರೆ ಅಲ್ವಾ ಅದು ಹೇಳಿ ಎಂದು ಕೇಳಿಕೊಂಡಿದ್ದಾಳೆ. ಇದಕ್ಕೆ ವೈದ್ಯರು ನಾವು ಪ್ರಾಣ ಉಳಿಸುವ ಜನ ಆ ರೀತಿ ಮಾಡುವುದಿಲ್ಲ ಎಂದು ಹೇಳಿದಾಗ ತಕ್ಷಣ ವೈದ್ಯರಿಗೆ ಮಾಡಿದ ಮೆಸ್ಸೇಜ್ ಅನ್ನು ಡಿಲೀಟ್ ಮಾಡಿ ನಂಬರ್ ಅನ್ನು ಬ್ಲಾಕ್ ಮಾಡಿದ್ದಾಳೆ. ಆದರೆ ಆಕೆ ಮೆಸ್ಸೇಜ್ ಡಿಲೀಟ್ ಮಾಡುವ ಮುನ್ನವೇ ಆಕೆ ಮಾಡಿದ್ದ ಮೆಸ್ಸೇಜ್ ನ ಸ್ಕ್ರೀನ್ ಶಾಟ್ ತೆಗೆದ ವೈದ್ಯ ಸುನೀಲ್ ಅವರು ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

Comments are closed.