Radhika Apte: ನಟಿ ರಾಧಿಕಾ ಆಪ್ಟೆ ಬಾತ್ ರೂಂ ಫೋಟೋ ವೈರಲ್ – ಒಂದು ಕೈಲಿ ಡ್ರಿಂಕ್ಸ್ ಮಾಡುತ್ತಾ ,ಮತ್ತೊಂದು ಕೈಲಿ ಎದೆಹಾಲು ಹಿಂಡಿದ ನಟಿ !!

Radhika Apte: ಭಾಫ್ಟಾ (ಬ್ರಿಟೀಷ್ ಅಕಾಡೆಮಿ ಫಿಲ್ಮ್ ಅವಾರ್ಡ್ಸ್) ನಲ್ಲಿ ಭಾಗಿ ಆಗಿರುವ ನಟಿ ರಾಧಿಕಾ ಆಪ್ಟೆ, ಸಾಮಾಜಿಕ ಜಾಲತಾಣದಲ್ಲಿ ಚಿತ್ರವೊಂದನ್ನು ಹಂಚಿಕೊಂಡಿದ್ದು, ಈ ಚಿತ್ರ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಹೌದು, ಇತ್ತೀಚೆಗೆ ಲಂಡನ್‌ನಲ್ಲಿ ನಡೆದ 78ನೇ ಬ್ರಿಟಿಷ್ ಅಕಾಡೆಮಿ ಫಿಲ್ಮ್ ಅವಾರ್ಡ್ಸ್ (BAFTAs) ಕಾರ್ಯಕ್ರಮದಲ್ಲಿ ರಾಧಿಕಾ ಆಪ್ಟೆ ಪಾಲ್ಗೊಂಡಿದ್ದರು. ಈ ವೇಳೆ ನಟಿ ರಾಧಿಕಾ ಆಪ್ಟೆ (Radhika Apte) ವಾಶ್ ರೂಂನಲ್ಲಿರುವ ಫೋಟೋ ಹಂಚಿಕೊಂಡು ವಿವಾದಕ್ಕೆ ಗುರಿಯಾಗಿದ್ದಾರೆ. ಫೋಟೋದಲ್ಲಿ ನಟಿ ರಾಧಿಕಾ ಆಪ್ಟೆ ಒಂದು ಕೈಯಲ್ಲಿ ಶ್ಯಾಂಪೇನ್ ಗ್ಲಾಸ್ ಹಿಡಿದಿದ್ದರೆ, ಮತ್ತೊಂದು ಕೈಯಲ್ಲಿ ತಮ್ಮ ಸ್ತನದಿಂದ ಎದೆಹಾಲು ಪಂಪ್ ಮಾಡುತ್ತಿದ್ದಾರೆ.
ಈ ಫೋಟೊ ಹಂಚಿಕೊಂಡು ಇದಕ್ಕೆ ವಿವರಣೆಯೂ ನೀಡಿದ್ದಾರೆ ರಾಧಿಕಾ. ಇದು ನನ್ನ BAFTAsನ ರಿಯಾಲಿಟಿ ಎಂದು ನಗುವ ಎಮೋಜಿ ಹಾಕಿದ್ದಾರೆ. ಬ್ರಿಟಿಷ್ ಅಕಾಡೆಮಿ ಫಿಲ್ಮ್ ಅವಾರ್ಡ್ಸ್‌ಗೆ ಹಾಜರಾಗಲು ನನಗೆ ಸಾಧ್ಯವಾಗಿಸಿದ್ದಕ್ಕಾಗಿ ನಾನು ನತಾಶಾ ಅವರಿಗೆ ಧನ್ಯವಾದ ಹೇಳಬೇಕು ಎಂದಿದ್ದಾರೆ. ನತಾಶಾ ನನ್ನೊಂದಿಗೆ ವಾಶ್‌ರೂಮ್‌ಗೆ ಬಂದಿದ್ದಲ್ಲದೆ, ನನಗಾಗಿ ಶಾಂಪೇನ್ ತಂದಳು. ಹೊಸದಾಗಿ ತಾಯಿಯಾಗುವುದು ಮತ್ತು ಇಂತಹ ಒತ್ತಡದ ಕೆಲಸ ಮಾಡುವುದು ಕಷ್ಟ ಎಂದು ಅವರು ಬರೆದುಕೊಂಡಿದ್ದಾರೆ. ಈ ಮಟ್ಟದ ಕಾಳಜಿ ಮತ್ತು ಸೂಕ್ಷ್ಮತೆಯು ನಮ್ಮ ಚಿತ್ರರಂಗದಲ್ಲಿ ಅಪರೂಪ ಎಂದು ಹೇಳಿಕೊಂಡಿದ್ದಾರೆ.
ಅಲ್ಲದೆ ಇದು ನನ್ನ ಭಾಫ್ಟಾದ ರಿಯಾಲಿಟಿ. ನತಾಶಾಗೆ ಇದಕ್ಕೆ ನಾನು ಧನ್ಯವಾದ ಹೇಳಲೇ ಬೇಕು. ಎದೆಹಾಲು ಸಂಗ್ರಹಿಸುವ ಟೈಮಿಂಗ್ ಅನ್ನು ಆಕೆಯೇ ನೋಡಿಕೊಳ್ಳುತ್ತಿದ್ದಾಳೆ. ಅದಕ್ಕೆ ಸೂಕ್ತ ಸ್ಥಳ, ಸಮಯ ಹುಡುಕಿ ನಾನು ನನ್ನ ಮಗುವಿಗೆ ಫೀಡ್ ಮಾಡಲು ಸಾಧ್ಯವಾಗುವಂತೆ ನೋಡಿಕೊಳ್ಳುತ್ತಿದ್ದಾಳೆ. ಎದೆಹಾಲು ಪಂಪ್ ಮಾಡಲು ಆಕೆ ಸಹಾಯ ಮಾಡುವ ಜೊತೆಗೆ ಶಾಂಪೇನ್ ಅನ್ನು ಬಾತ್ರೂಂಗೆ ತಂದುಕೊಟ್ಟಿದ್ದಾಳೆ. ಹೊಸದಾಗಿ ತಾಯಿ ಆಗಿ ಜೊತೆ-ಜೊತೆಗೆ ಕೆಲಸವನ್ನು ನಿರ್ವಹಿಸುವುದು ಸುಲಭದ ಕಾರ್ಯವಲ್ಲ. ಈ ಹಂತದ ಕಾಳಜಿ ಮತ್ತು ಸೂಕ್ಷ್ಮತೆ ನಮ್ಮ ಚಿತ್ರರಂಗದಲ್ಲಿ ನೋಡಲು ಸಿಗುವುದಿಲ್ಲ’ ಎಂದಿದ್ದಾರೆ ರಾಧಿಕಾ ಆಪ್ಟೆ

ಇನ್ನು ರಾಧಿಕಾರ ಪೋಸ್ಟ್ಗೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮದ್ಯ ಸೇವಿಸುತ್ತಾ ಮಗುವಿಗಾಗಿ ಎದೆಹಾಲು ಪಂಪ್ ಮಾಡುತ್ತಿರುವುದು ಹಲವರ ಅಸಮಾಧಾನಕ್ಕೆ ಕಾರಣವಾಗಿದೆ. ಹೀಗೆ ಮಾಡುವುದು ಮಗುವಿನ ಆರೋಗ್ಯದ ಮೇಲೆ ಪರೋಕ್ಷ ಪರಿಣಾಮ ಬೀರಬಹುದು ಎಂದು ಕೆಲವರು ಆತಂಕ ವ್ಯಕ್ತಪಡಿಸಿದ್ದಾರೆ.
Comments are closed.