Home News Bank: ಮಂಗಳೂರು: ಬ್ಯಾಂಕ್ ಲಾಕರ್‌ನಲ್ಲಿಟ್ಟ ದುಡ್ಡಿಗೆ ಗೆದ್ದಲು: 8 ಲಕ್ಷ ಗೆದ್ದಲ ಪಾಲು!

Bank: ಮಂಗಳೂರು: ಬ್ಯಾಂಕ್ ಲಾಕರ್‌ನಲ್ಲಿಟ್ಟ ದುಡ್ಡಿಗೆ ಗೆದ್ದಲು: 8 ಲಕ್ಷ ಗೆದ್ದಲ ಪಾಲು!

Hindu neighbor gifts plot of land

Hindu neighbour gifts land to Muslim journalist

Bank: ಮಂಗಳೂರಿನ (Mangaluru) ಕೋಟೆಕಾರ್‌ನಲ್ಲಿರುವ ಕೆನರಾ ಬ್ಯಾಂಕ್ ಲಾಕರ್ ನಲ್ಲಿ ಇಟ್ಟ 8 ಲಕ್ಷ ರೂ. ವನ್ನು 6 ತಿಂಗಳ ಬಳಿಕ ಔಷಧಿಗಾಗಿ ದುಡ್ಡು ತೆಗೆಯಲು ಲಾಕರ್‌ ತೆರೆದಿದ್ದಾರೆ. ಆದರೆ ಬ್ಯಾಂಕ್‌ ಲಾಕರ್‌ನಲ್ಲಿ (Bank Locker) ಇಟ್ಟಿದ್ದ 8 ಲಕ್ಷ ರೂಪಾಯಿ ಗೆದ್ದಲು ತಿಂದು ಹಾಕಿದೆ.

ಬ್ಯಾಂಕ್ ನವರೇ ಖುದ್ದಾಗಿ ಲಾಕರ್ ಓಪನ್ ಮಾಡಿದ್ದಾರೆ. ಲಾಕರ್ ಮಳೆನೀರಿನಲ್ಲಿ ನೆಂದ ಸ್ಥಿತಿಯಲ್ಲಿದ್ದರೆ ದುಡ್ಡು ಸಂಪೂರ್ಣವಾಗಿ ಕಪ್ಪಾಗಿ ಹುಡಿ ಹುಡಿಯಾಗಿ ಗೆದ್ದಲು ಹಿಡಿದು ಚೂರಾಗಿ ಬಿದ್ದಿದೆ.

ಆರ್‌ಬಿಐ ನಿಯಮದ ಪ್ರಕಾರ ಪ್ರಕಾರ ದುಡ್ಡನ್ನು ಲಾಕರ್‌ನಲ್ಲಿ ಇಡುವಂತಿಲ್ಲ ಹೀಗಾಗಿ ಇದಕ್ಕೂ ನಮಗೂ ಸಂಬಂಧ ಇಲ್ಲ ಎಂದು ಬ್ಯಾಂಕ್‌ನವರು ಹೇಳಿದ್ದಾರೆ. ಹೀಗಾಗಿ ಸಫಲ್ ಕುಟುಂಬಸ್ಥರು ಬೆಂಗಳೂರಿಗೆ ಆಗಮಿಸಿ ಪ್ರಧಾನ ಕಚೇರಿಗೆ ದೂರು ನೀಡಿ, ಹಳೆಯ ಕಟ್ಟಡ ನಿರ್ವಹಣೆ ಕೊರತೆಯಿಂದ ಸಮಸ್ಯೆಯಾಗಿದೆ. ಹೀಗಾಗಿ ಸರಿಪಡಿಸಬೇಕು ಎಂದು ಮನವಿ ಮಾಡಿದ್ದಾರೆ.