Viral Video: ಮಾಜಿ ಪ್ರೇಮಿಯ ಮನೆಗೆ 100 ಪಿಜ್ಜಾ ಆರ್ಡರ್ ಮಾಡಿ ಸೇಡು ತೀರಿಸಿಕೊಂಡ ಯುವತಿ

Love is Blind: ಪ್ರೀತಿಯಲ್ಲಿ ಬಿದ್ದ ಪ್ರತಿಯೊಬ್ಬ ವ್ಯಕ್ತಿಗೆ ಮೊದ ಮೊದಲು ಎಲ್ಲವೂ ಬಹಳ ಸುಮಧುರ ಭಾವನೆ ಇರುತ್ತದೆ. ಇತ್ತೀಚೆಗೆ ಪ್ರಾಮಾಣಿಕವಾಗಿ ಪ್ರೀತಿ ಮಾಡುವವರು ಸಿಗುವುದು ಅಲ್ಲೋ ಇಲ್ಲೋ ಒಂದಿಬ್ಬರು ಎಂದರೆ ತಪ್ಪಾಗಲಾರದು. ಏಕೆಂದರೆ ಸಣ್ಣಪುಟ್ಟ ಕಾರಣಗಳಿಗೆ ಬ್ರೇಕಪ್ ಮಾಡಿಕೊಳ್ಳುವ ಈ ಕಾಲದಲ್ಲಿ ನಿಷ್ಕಲ್ಮಶ ಪ್ರೀತಿ ಸಿಗುವುದು ಸ್ವಲ್ಪ ಕಷ್ಟ ಸಾಧ್ಯನೇ ಸರಿ. ಅಲ್ವಾ? ಈ ಎಲ್ಲಾ ಪೀಠಿಕೆ ಏಕೆ ಅಂದರೆ, ಇಲ್ಲೊಂದು ಕಡೆ ಪ್ರೇಮಿಗಳು ಬ್ರೇಕಪ್ ಮಾಡಿಕೊಂಡಿದ್ದಾರೆ. ಆದರೆ ಯುವತಿ ತನ್ನಿಂದ ದೂರವಾದ ಪ್ರೇಮಿಗೆ ವಿಭಿನ್ನ ರೀತಿಯಲ್ಲಿ ಸೇಡು ತೀರಿಸಿಕೊಂಡಿದ್ದಾರೆ. ಹೇಗೆ ಅಂತೀರಾ? ಇಲ್ಲಿದೆ ವಿಷಯ

24 ವರ್ಷದ ಆಯುಷಿ ರಾವತ್ ಎಂಬ ಯುವತಿ ತನ್ನಿಂದ ದೂರವಾದ ಪ್ರೇಮಿಗೆ ಪ್ರೇಮಿಗಳ ದಿನದಂದೇ ವಿಭಿನ್ನವಾಗಿ ಸೇಡು ತೀರಿಸಿಕೊಂಡಿದ್ದಾಳೆ. ಮಾಜಿ ಗೆಳೆಯನ ಮನೆಗೆ ಬರೋಬ್ಬರಿ 100 ಫಿಜ್ಜಾಗಳನ್ನು ಈಕೆ ಆರ್ಡರ್ ಮಾಡಿದ್ದು, ಕ್ಯಾಶ್ ಆನ್ ಡೆಲಿವರಿ ಎಂಬುವುದನ್ನು ಆಯ್ಕೆ ಮಾಡಿದ್ದಾಳೆ. ಇದಲ್ಲವೇ ಸೇಡು ಅಂದರೆ, ಅತ್ತ ಕೋಲೂ ಮುರಿಬಾರದು, ಹಾವೂ ಸಾಯಬಾರದು ಎನ್ನುವ ರೀತಿ.
ಅಂದ ಹಾಗೆ ಈ ಘಟನೆ ನಡೆದಿರುವುದು ಗುರುಗಾಂವ್‌ನಲ್ಲಿ. ಈ ಕುರಿತ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಪ್ರೇಮಿಯ ಹೆಸರು ಯಶ್, ಹುಡುಗಿ ಆಯುಷಿ ರಾವತ್. ಸಣ್ಣಪುಟ್ಟ ವಿಷಯಕ್ಕೆ ಗಲಾಟೆ ಮಾಡಿಕೊಳ್ಳುತ್ತಿದ್ದ ಇವರ ಮಧ್ಯೆ ಮನಸ್ತಾಪ ಉಂಟಾಗಿದೆ. ಆದರೆ ಆಯುಷಿ ಎಲ್ಲವನ್ನೂ ಮರೆತು ಮತ್ತೆ ಒಟ್ಟಿಗಿರೋಣ ಎಂಬ ಮನಸ್ಸು ಮಾಡಿದ್ದರೆ, ಯುವಕ ನೋ ವೇ ಎಂದಿದ್ದಾನೆ. ಆದರೆ ಯುವತಿ ಮನಸಾರೆ ಪ್ರೀತಿಸಿದ್ದಳು. ಆ ನೋವಿನಿಂದ ಆಕೆಗೆ ಹೊರಬರಲು ಆಗಿಲ್ಲ. ಹೀಗಿರುವಾಗಲೇ ಪ್ರೇಮಿಗಳ ದಿನವೇ ಪ್ರಿಯಕರನ ನೆನಪು ಕಾಡಿದ್ದು, ಆತನ ವಿರುದ್ಧ ಈ ರೀತಿಯ ಸೇಡು ತೀರಿಸಿ ಮನಸ್ಸು ಹಗುರಾಗಿಸಿದ್ದಾಳೆ.
100 ಫಿಜ್ಜಾ ಪಡೆದ ಆ ಮಾಜಿ ಗೆಳೆಯನ ಪರಿಸ್ಥಿತಿ ಏನಾಯಿತು? ಇನ್ನೇನು ಡೆಲಿವರಿ ಏಜೆಂಟ್‌ನೊಂದಿಗೆ ವಾಗ್ವಾದಕ್ಕೆ ಇಳಿದ ಆತ ಕೊನೆಗೆ ಏನೂ ದಾರಿ ಕಾಣದೆ 100 ಫಿಜ್ಜಾಗೆ ಹದಿನೈದು ಸಾವಿರ ರೂಪಾಯಿ ಪಾವತಿ ಮಾಡಿ ಮನೆಯೊಳಗೆ ಹೋಗಿದ್ದಾನೆ.
Comments are closed.