RBI ನಿಂದ ಹೊಸ 50ರೂ ನೋಟು ಬಿಡುಗಡೆ!!

Share the Article

RBI: ಭಾರತೀಯ ರಿಸರ್ವ್ ಬ್ಯಾಂಕ್ ಐವತ್ತು ರೂಪಾಯಿಯ ಹೊಸ ನೋಟುಗಳನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದೆ.

ಹೌದು, RBI: ಭಾರತೀಯ ರಿಸರ್ವ್ ಬ್ಯಾಂಕ್ (RBI) 50 ರೂಪಾಯಿ ನೋಟಿನ ಕುರಿತು ಬಿಗ್​ ಅಪ್ಡೇಟ್ ನೀಡಿದೆ. ಅದೇನೆಂದರೆ ಆರ್​ಬಿಐ ಮಾಡಿರುವ ಹೊಸ ಘೋಷಣೆಯಂತೆ, ಹೊಸದಾಗಿ ನೇಮಕಗೊಂಡ ಗವರ್ನರ್ ಸಂಜಯ್ ಮಲ್ಹೋತ್ರಾ ಅವರ ಸಹಿಯನ್ನು ಹೊಂದಿರುವ ಹೊಸ 50 ರೂಪಾಯಿ ನೋಟುಗಳನ್ನು ಬಿಡುಗಡೆ ಮಾಡಿದೆ.

ಅಂದಹಾಗೆ ಈಗಿರುವ ನೋಟಿನ ಮುಂದುವರಿಕೆಯಾಗಿ ಹೊಸ ನೋಟುಗಳು ಇರುತ್ತವೆ. ಹೆಚ್ಚಿನ ನೋಟುಗಳನ್ನು ಮಾರುಕಟ್ಟೆಗೆ ತಂದು ಹಣಕಾಸಿನ ವ್ಯವಸ್ಥೆಯ ನಿರಂತರ ಹರಿವನ್ನು ಖಚಿತಪಡಿಸಿಕೊಳ್ಳಲು ಮಾತ್ರ ಹೊಸ ನೋಟುಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಹಿಂದೆ ಬಿಡುಗಡೆಯಾದ ಎಲ್ಲಾ 50 ರೂ. ನೋಟುಗಳು ಕಾನೂನುಬದ್ಧವಾಗಿ ಮುಂದುವರಿಯುತ್ತವೆ ಎಂದು RBI ತಿಳಿಸಿದೆ.

Comments are closed.