Dolly Dhananjay: ಮದುವೆಯ ದಿನವೇ ಪತ್ನಿ ಜೊತೆ ಹಠಕ್ಕೆ ನಿಂತ ಡಾಲಿ ಧನಂಜಯ್!! ಎಲ್ಲರೂ ಶಾಕ್

Dolly Dhananjay: ನಟ ರಾಕ್ಷಸ ಡಾಲಿ ಧನಂಜಯ್ ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಈಗಾಗಲೇ ಮದುವೆಯ ವಿಧಿ ವಿಧಾನಗಳು ಅದ್ಧೂರಿಯಾಗಿ ನಡೆಯುತ್ತಿದೆ.ನಿನ್ನೆ ಧನಂಜಯ್ ಮತ್ತು ಡಾಕ್ಟರ್ ಧನ್ಯತಾ ಜೋಡಿ ಹಳದಿ ಶಾಸ್ತ್ರದ ಸಂಭ್ರಮದಲ್ಲಿ ಮಿಂದೆದ್ದಿದ್ದಾರೆ. ಆದರೆ ಮದುವೆಯ ದಿನವೇ ದಾಳಿ ಧನಂಜಯ್ ಅವರು ಪತ್ನಿ ಜೊತೆ ಹಠಕ್ಕೆ ನಿಂತಿದ್ದಾರೆ.

ಹೌದು, ಶಾಸ್ತ್ರವೊಂದರಲ್ಲಿ ಪತ್ನಿ ತನ್ನ ಕಾಲಿಗೆ ಬೀಳೋದು ಬೇಡ ಎಂದು ಧನಂಜಯ್ ಹಠ ಹಿಡಿದಿದ್ದಾರೆ. ಕಾಲುಂಗುರು ತೊಡಿಸಿದ ಬಳಿಕ ಧನ್ಯತಾ ಅವರನ್ನು ಧನಂಜಯ್ ಕಾಲಿಗೆ ನಮಸ್ಕರಿಸುವಂತೆ ಪುರೋಹಿತರು ಹೇಳುತ್ತಾರೆ. ಆದರೆ ಧನಂಜಯ್ ತನ್ನ ಕಾಲಿಗೆ ಪತ್ನಿ ನಮಸ್ಕರಿಸುವುದು ಬೇಡ ಎಂದು ಹಠ ಹಿಡಿಯುತ್ತಾರೆ. ಆದರೆ ಕುಟುಂಬುದವರ ಒತ್ತಾಯದ ಮೇರೆಗೆ ಧನಂಜಯ್ ಸುಮ್ಮನಾಗುತ್ತಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Comments are closed.