Home News Udupi: ಅಕ್ರಮ ಕೋಣ ಸಾಗಾಟ ಮಾಡುತ್ತಿದ್ದ ಟೆಂಪೋ ಪಲ್ಟಿ ಆರೋಪಿಗಳಿಗೆ ಗಾಯ, ಓರ್ವ ಎಸ್ಕೇಪ್!

Udupi: ಅಕ್ರಮ ಕೋಣ ಸಾಗಾಟ ಮಾಡುತ್ತಿದ್ದ ಟೆಂಪೋ ಪಲ್ಟಿ ಆರೋಪಿಗಳಿಗೆ ಗಾಯ, ಓರ್ವ ಎಸ್ಕೇಪ್!

Hindu neighbor gifts plot of land

Hindu neighbour gifts land to Muslim journalist

Udupi: ಅಕ್ರಮವಾಗಿ ಕೋಣಗಳನ್ನು ಸಂಕೇಶ್ವರದಿಂದ ಮಂಗಳೂರಿಗೆ ಸಾಗುಸುತ್ತಿದ್ದಾಗ ಟೆಂಪೋವೊಂದು ವಿದ್ಯುತ್ ಕಂಬಕ್ಕೆ ಢಿಕ್ಕಿ ಆಗಿ ಮಗುಚಿ ಬಿದ್ದ ಪರಿಣಾಮ ಎರಡು ಕೋಣಗಳು ಗಾಯಗೊಂಡಿದ್ದಲ್ಲದೆ ಆರೋಪಿಗಳಿಗೂ ಗಾಯವಾಗಿರುವ ಘಟನೆ ಅಂಬಾಗಿಲು ಜಂಕ್ಷನ್ ಬಳಿ ನಡೆದಿದೆ.

ಶೀತಲ್ ಗಣಪತಿ ಬಾಗಣ್ಣರ, ಯಮನಪ್ಪ ರಮೇಶ್ ಅರ್ಜುನ ವಾಡ ಎಂಬವರು ಕೋಣಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪಿಗಳಾಗಿದ್ದಾರೆ. ಪರಶು ಎಂಬ ಮತ್ತೋರ್ವ ಆರೋಪಿ ಅಪಘಾತವಾದ ಕೂಡಲೇ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ. ಟೆಂಪೋದಲ್ಲಿದ್ದ ಎರಡು ಎಮ್ಮೆಗಳು ತೀವ್ರವಾಗಿ ಗಾಯಗೊಂಡಿವೆ‌. ಗಾಯಾಳು ಆರೋಪಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಉಡುಪಿ (Udupi) ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.