Bhadravati: ಅಪ್ಪನ ಅಧಿಕಾರದಲ್ಲಿ ಮಗನ ದಬ್ಬಾಳಿಕೆ; ಮಹಿಳಾ ಅಧಿಕಾರಿಗೆ ಸೊಂಟದ ಕೆಳಗಿನ ಶಬ್ದ ಬಳಕೆ

Share the Article

Bhadravati: ಅಕ್ರಮ ಮರಳು ದಂಧೆ ತಡೆಯಲು ಹೋದ ಗಣಿ ಮತ್ತು ಭೂವಿಜ್ಞಾನದ ಮಹಿಳಾ ಅಧಿಕಾರಿ ವಿರುದ್ಧ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಶಾಸಕ ಬಿಕೆ ಸಂಗಮೇಶ್‌ ಪುತ್ರ ಸೊಂಟದ ಕೆಳಗಿನ ಪದಗಳನ್ನು ಉಪಯೋಗಿಸಿ, ನಿಂದಿಸಿದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಸಂಗಮೇಶ್‌ ಅವರ ಪುತ್ರ ಬಸವೇಶ್‌ ಮಹಿಳಾ ಅಧಿಕಾರಿ ಜ್ಯೋತಿ ಎಂಬುವವರಿಗೆ ಬೈದಿರುವುದು ವೀಡಿಯೋದಲ್ಲಿ ಕಾಣುತ್ತಿದೆ. ಭದ್ರಾ ನದಿ ತಟದಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ಗಣಿಗಾರಿಕೆ ಮೇಲೆ ಗಣಿ ಇಲಾಖೆಯ ವಿಜ್ಞಾನಿ ಜ್ಯೋತಿ ಅವರು ಕಳೆದ ರಾತ್ರಿ ದಾಳಿ ಮಾಡಿದ ಸಂದರ್ಭದಲ್ಲಿ ಸಂಗಮೇಶ್‌ ಅವರ ಪುತ್ರ ಬಸವೇಶ್‌ನ ಆಕ್ರಮಣಕಾರಿ ಮಾತು ಓರ್ವ ಮಹಿಳೆಗೆ ಬಳಸಲಾಗಿದೆ.

ಈ ಕೃತ್ಯಕ್ಕೆ ಸಂಬಂಧಪಟ್ಟಂತೆ ಜೆಡಿಎಸ್‌ ಮತ್ತು ಬಿಜೆಪಿ ತೀವ್ರವಾಗಿ ಖಂಡಿಸಿದೆ. ಕಾಂಗ್ರೆಸ್‌ ಆಡಳಿತದಲ್ಲಿ ಮಹಿಳಾ ಅಧಿಕಾರಿಗಳಿಗೆ ಮರ್ಯಾದೆಯಿಲ್ಲ, ಇದು ಈ ಸರಕಾರದ ಕೊಡುಗೆಯೇ? ಎನ್ನುವ ಮಾತು ಎಲ್ಲಾ ಕಡೆ ಕೇಳಿ ಬರುತ್ತಿದೆ.

Comments are closed.