Home News Delhi : ದೆಹಲಿಯಲ್ಲಿ ಭರ್ಜರಿ ಗೆಲುವು, ಕಾಂಗ್ರೆಸ್‌-ಆಪ್‌ ಕಿತ್ತಾಟ ಬಿಜೆಪಿಗೆ ಪ್ಲಸ್ ಆಗಿದ್ಹೇಗೆ?

Delhi : ದೆಹಲಿಯಲ್ಲಿ ಭರ್ಜರಿ ಗೆಲುವು, ಕಾಂಗ್ರೆಸ್‌-ಆಪ್‌ ಕಿತ್ತಾಟ ಬಿಜೆಪಿಗೆ ಪ್ಲಸ್ ಆಗಿದ್ಹೇಗೆ?

Hindu neighbor gifts plot of land

Hindu neighbour gifts land to Muslim journalist

Delhi: ದೆಹಲಿ ಚುನಾವಣಾ ಫಲಿತಾಂಶ ಹೊರ ಬಿದ್ದಿದೆ. 48 ಸ್ಥಾನಗಳಲ್ಲಿ ಬಿಜೆಪಿ ಜಯಗಳಿಸಿದರೆ ಆಪ್ 22 ಸ್ಥಾನಗಳಿಗೆ ಸಮಾಧಾನ ಪಟ್ಟುಕೊಂಡಿದೆ. ಒಟ್ಟಿನಲ್ಲಿ ಬರೋಬ್ಬರಿ 27 ವರ್ಷಗಳ ಬಳಿಕ ರಾಷ್ಟ್ರ ರಾಜಧಾನಿಯಲ್ಲಿ ಬಿಜೆಪಿ ಅಧಿಕಾರ ಹಿಡಿದಿದೆ. ಇನ್ನು ಕಾಂಗ್ರೆಸ್ ಒಂದು ಸ್ಥಾನವನ್ನು ಕೂಡ ಗಳಿಸದೆ ಹೀನಾಯವಾಗಿ ಸೋಲನ್ನು ಕಂಡಿದೆ. ಅಲ್ಲದೆ ಕಾಂಗ್ರೆಸ್ ಮತ್ತು ಆಪ್ ಪಕ್ಷಗಳು ಮಾಡಿಕೊಂಡ ಎಡವಟ್ಟು ಬಿಜೆಪಿಯ ಗೆಲುವಿಗೆ ಕಾರಣವಾಗಿದೆ. ಹಾಗಾದರೆ ಇಬ್ಬರ ಜಗಳ ಮೂರನೆಯವನಿಗೆ ಲಾಭ ಆಗಿದ್ದು ಹೇಗೆ?

ಹೌದು, ಲೋಕಸಭಾ ಚುನಾವಣೆಯಲ್ಲಿ ಇಂಡಿಯಾ ಕೂಟದಲ್ಲಿ ಆಪ್ ಕೂಡ ಸೇರಿಕೊಂಡಿತ್ತು. ಕಾಂಗ್ರೆಸ್ ನೇತೃತ್ವದ ಈ ಮಹಾಘಟಬಂಧನ್ ನಂತರದಲ್ಲಿ ಟುಸ್ ಆಗಿಬಿಟ್ಟಿತು. ಬಳಿಕ ಆಪ್ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ತಿಳಿಸಿತು. ಅಂತಯೇ ದಿಲ್ಲಿಯ ಕಾಂಗ್ರೆಸ್‌ನ ಏಕಾಂಗಿ ಸ್ಪರ್ಧೆಯು ಆಪ್‌ಗೆ ದೊಡ್ಡ ಪೆಟ್ಟು ನೀಡಿತು. ಇದು ವಿರೋಧ ಪಕ್ಷದ ಮತಗಳನ್ನು ವಿಭಜಿಸಿ ಬಿಜೆಪಿಗೆ ಗೆಲುವಿನ ಹಾದಿಯನ್ನು ಸುಗಮಗೊಳಿಸಿತು ಎಂಬ ಚರ್ಚೆ ದಿಲ್ಲಿ ರಾಜಕೀಯ ಪಡಸಾಲೆಯಲ್ಲಿ ನಡೆಯುತ್ತಿದೆ.

ಇನ್ನು ಚುನಾವಣಾ ಆಯೋಗದ ಮಾಹಿತಿಯ ಪ್ರಕಾರ, ಎಎಪಿ ಶೇ.43 ರಷ್ಟು ಮತಗಳನ್ನು ಪಡೆದರೆ, ಬಿಜೆಪಿ ಶೇ. 45 ರಷ್ಟು ಮತಗಳನ್ನು ಪಡೆದುಕೊಂಡಿತು. ಕಾಂಗ್ರೆಸ್ ಶೇ. 6 ರಷ್ಟು ಮತಗಳನ್ನು ಪಡೆದರೂ ಒಂದು ಸ್ಥಾನ ಗೆಲ್ಲಲು ಸಾಧ್ಯವಾಗಲಿಲ್ಲ. ಚುನಾವಣೆಯಲ್ಲಿ ಎಎಪಿ-ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದ್ದರೆ, ಬಿಜೆಪಿಯನ್ನು (BJP) ವಿರೋಧ ಪಕ್ಷದಲ್ಲಿ ಉಳಿಸಬಹುದಿತ್ತು. ಎರಡೂ ಪಕ್ಷಗಳು ಒಪ್ಪಂದ ಮಾಡಿಕೊಳ್ಳದೇ ಇದ್ದದ್ದು, ದೆಹಲಿ ಚುನಾವಣೆಯಲ್ಲಿ (Delhi Election Results) ಬಹುದೊಡ್ಡ ಬೆಲೆ ತೆರುವುದಕ್ಕೆ ಕಾರಣವಾಯಿತು ಎಂಬುದು ಸದ್ಯದ ವಿಶ್ಲೇಷಣೆ.