Chigalli Lamp: 46 ವರ್ಷದ ಬಳಿಕ ಆರಿದ ಚಿಗಳ್ಳಿ ದೀಪ; ಇತಿಹಾಸವೇನು? ಮಂಗಳೂರಿನ ಜ್ಯೋತಿಷಿ ನೀಡಿದ ಸಲಹೆ ಏನು?

Share the Article

Chigalli Lamp: ಯಾವುದೇ ಎಣ್ಣೆ, ಬತ್ತಿ ಇಲ್ಲದೇ ನಿರಂತರ 46 ವರ್ಷಗಳಿಂದ ಉರಿಯುತ್ತಿದ್ದ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ತಾಲೂಕಿನ ಚಿಗಳ್ಳಿಯ ಪ್ರತಿಷ್ಠಿತ ದೀಪನಾಥೇಶ್ವರ ದೇವಾಲಯದ ಮೂರು ದೀಪಗಳು ನಂದಿ ಹೋಗಿದೆ.

ಇದರ ಇತಿಹಾಸವೇನು?

ಈ ಹಿಂದೆ ಹಲವು ಶರಣರು ಹಾಗೂ ಸಂತರು ಚಿಗಳ್ಳಿಯಲ್ಲಿ ವಾಸ ಮಾಡುತ್ತಿದ್ದರು. ಆ ಶರಣರಲ್ಲಿ ಮೂವರು ಕಾಲವಾದರು. 1978 ರ ಕಾಲಘಟ್ಟದಲ್ಲಿ ಶಾರದಾಬಾಯಿ ಹಾಗೂ ಅಣ್ಣಪ್ಪ ಅನ್ನೋ ದೈವಭಕ್ತ ದಂಪತಿ ಇಲ್ಲಿ ವಾಸ ಮಾಡುತ್ತಿದ್ದರು. ಅಂದಿನ ದಿನಗಳಲ್ಲಿ ವಿದ್ಯುತ್‌ ಇಲ್ಲರಿಲ್ಲ. ಚಿಮಣಿ ದೀಪವೇ ಮನೆಯನ್ನು ಬೆಳಗುತ್ತಿತ್ತು. ಆ ಮೂರು ಶರಣರ ನೆನಪಿಗೆ 1978 ರಿಂದ 80 ರ ನಡುವಿನ ಅವಧಿಯಲ್ಲಿ ಈ ಮೂರು ದೀಪಗಳನ್ನು ಶಾರದಾಬಾಯಿ ಹಚ್ಚಿದರು. ಈ ದೀಪಗಳು ಎಣ್ಣೆ ಹಾಗೂ ಬತ್ತಿ ಇಲ್ಲದಿದ್ದರೂ ಉರಿಯತೊಡಗಿದವು. ಇದನ್ನು ಕಂಡು ಶಾರದಾದೇವಿಗೆ ಆಶ್ಚರ್ಯ ಉಂಟಾಗಿದೆ. ಇದೆಲ್ಲ ಶರಣರ ಪವಾಡ ಎಂದುಕೊಂಡ ದಂಪತಿ ಆ ದೀಪಗಳನ್ನು ಬ್ರಹ್ಮ, ವಿಷ್ಣು, ಮಹೇಶ್ವರರ ರೂಪವಾಗಿ ಪೂಜಿಸಲು ಆರಂಭಿಸಿದ್ದಾರೆ. ಈ ಸ್ಥಳದಲ್ಲಿ ಗಣಪತಿ, ಈಶ್ವರಲಿಂಗ, ಪಾರ್ವತಿ, ನಂದಿ ದೇವರ ವಿಗ್ರಹಗಳು ಇದೆ. ಈ ಕ್ಷೇತ್ರವನ್ನು ದತ್ತಾತ್ರೇಯ ಅವತಾರವೆಂದು ಹೇಳಲಾಗುತ್ತದೆ.

 

1979 ರಲ್ಲಿ ದೈವಜ್ಞ ಶಾರದಮ್ಮ ಎಂಬುವವರು ಸೀಮೆ ಎಣ್ಣೆ ಹಾಕಿ ಈ ದೀಪವನ್ನು ಬೆಳಗಿಸಿದ್ದರು. ಅಲ್ಲಿಂದ ಇಲ್ಲಿಯವರೆಗೂ ಈ ದೀಪ ಯಾವುದೇ ಎಣ್ಣೆ, ಬತ್ತಿಯಿಲ್ಲದೇ ಬೆಳಗುತ್ತಲೇ ಇತ್ತು. ಈ ಕಾರಣದಿಂದ ಇಲ್ಲಿಗೆ ನೂರಾರು ಜನರು ಭೇಟಿ ನೀಡಿ ಈ ವಿಸ್ಮಯವನ್ನು ಕಣ್ತುಂಬಿಕೊಳ್ಳುತ್ತಿದ್ದರು. ದೀಪನಾಥೇಶ್ವರ ಎಂಬ ಹೆಸರಿನಲ್ಲಿ ಪೂಜೆಗಳನ್ನು ಭಕ್ತರು ಮಾಡುತ್ತಿದ್ದರು. ಕಳೆದ 14 ದಿನದ ಹಿಂದೆ ದೀಪದ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ವೆಂಕಟೇಶ್‌ ಎಂಬುವವರು ಮೃತ ಹೊಂದಿದ್ದು, ಸೂತಕದ ಕಾರಣ ದೇವಸ್ಥಾನದ ಗರ್ಭಗುಡಿಯನ್ನು ಮುಚ್ಚಲಾಗಿತ್ತು. ಆದರೆ ಬುಧವಾರ ದೇವಸ್ಥಾನದ ಗರ್ಭಗುಡಿಯನ್ನು ಸ್ವಚ್ಛ ಮಾಡಲು ಕುಟುಂಬದವರು ತೆರಳಿದಾಗ ದೀಪ ಆರಿರುವುದು ಕಂಡು ಬಂದಿದೆ.

 

ಪವಾಡ ಪುರುಷರ ಆತ್ಮಗಳು ದಿವ್ಯ ಜ್ಯೋತಿ ರೂಪದಲ್ಲಿ ಕಳೆದ ನಾಲ್ಕೂವರೆ ದಶಕಗಳಿಂದ ಬೆಳಗುತ್ತಿದ್ದು, ಮತ್ತೊಮ್ಮೆ ದೀಪಗಳು ಎಣ್ಣೆ ಇಲ್ಲದೇ ಉರಿಯಬಹುದು ಎಂಬ ನಂಬಿಕೆ ಇದೆ. ನಂದಿದ ದೀಪಗಳಿಂದ ಊರಿಗೆ ಯಾವುದೇ ರೀತಿಯ ಕೆಡಕು ಆಗದಿರಲಿ ಎಂದು ಕೆಡಿಸಿಸಿ ಬ್ಯಾಂಕ್‌ ನಿರ್ದೇಶಕ ಎಲ್‌.ಟಿ.ಪಾಟೀಲ ಹೇಳಿದರು.

 

ಈ ಭಕ್ತಿ ದೀಪಗಳು ಆರಿದ ವಿಚಾರಕ್ಕೆ ಸಂಬಂಧಪಟ್ಟಂತೆ ಮಂಗಳೂರಿನ ಜ್ಯೋತಿಷ್ಯರೊಬ್ಬರನ್ನು ಊರವರು ಭೇಟಿ ಮಾಡಿದ್ದಾರೆ. ಅವರು ಈ ಕುಟುಂಬದ ಕೊನೆಯ ಹೆಣ್ಣುಮಗಳು ಅಲ್ಲಿ 3 ತುಪ್ಪದ ದೀಪಗಳನ್ನು ಹಚ್ಚಬೇಕು ಎನ್ನುವ ಸೂಚನೆ ನೀಡಿದ್ದಾರೆ. ಹಾಗೂ ಆ ದೀಪಗಳನ್ನು 48 ದಿನಗಳ ಕಾಲ ಆರದಂತೆ ಕಾಪಾಡಿಕೊಳ್ಳಬೇಕು. ಆಮೇಲೆ ನಂದಾದೀಪದಲ್ಲಿ ಏನಾದರೂ ವ್ಯತ್ಯಾಸ ಕಾಣಬಹುದು ಎಂದು ತಿಳಿಸಿದ್ದಾರೆ.

Comments are closed.