Home News Kalburgi: ಬಿಡುಗಡೆ ಭಾಗ್ಯ ದೊರಕಿದರೂ, ದಂಡ ಕಟ್ಟಲು ಹಣದ ಕೊರತೆ; ಜೈಲಲ್ಲಿ ದುಡಿದ ಹಣದಿಂದ ಹೊರ...

Kalburgi: ಬಿಡುಗಡೆ ಭಾಗ್ಯ ದೊರಕಿದರೂ, ದಂಡ ಕಟ್ಟಲು ಹಣದ ಕೊರತೆ; ಜೈಲಲ್ಲಿ ದುಡಿದ ಹಣದಿಂದ ಹೊರ ಬಂದ ವ್ಯಕ್ತಿ

Hindu neighbor gifts plot of land

Hindu neighbour gifts land to Muslim journalist

Kalburgi: ಜೈಲು ಸೇರಿದ ನಂತರ ತನ್ನ ಸನ್ನಡತೆ ಆಧಾರದಲ್ಲಿ ಬಿಡುಗಡೆ ಭಾಗ್ಯ ದೊರಕಿದರೂ, ಬಡತನದ ಕಾರಣದಿಂದ ಜೈಲಿನಿಂದ ಹೊರಬರಲು ಕೈದಿಯೊಬ್ಬರು ಮೂರು ತಿಂಗಳು ಕಾಯಬೇಕಾದ ಪರಿಸ್ಥಿತಿ ನಿರ್ಮಾಣ ಉಂಟಾಗಿತ್ತು. ಆದರೆ ಈ ಜೈಲು ಹಕ್ಕಿಗೆ ಜೈಲಿನಲ್ಲಿ ದುಡಿದ ತನ್ನ ಹಣದಿಂದ ಬಿಡುಗಡೆಯ ಭಾಗ್ಯ ದೊರಕಿದೆ. ಇದಕ್ಕೆ ಆ ಜೈಲಿನ ಜೈಲಾಧಿಕಾರಿ ಮಾಡಿದ ಸಹಾಯ, ಮಾನವೀಯ ಗುಣ ಇಲ್ಲಿ ಶ್ಲಾಘನೀಯ.

ರಾಯಚೂರು ಜಿಲ್ಲೆ ಲಿಂಗಸೂರು ತಾಲೂಕಿನ ದುರ್ಗಪ್ಪ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದು, 2013 ರಲ್ಲಿ ಜೀವಾವಧಿ ಶಿಕ್ಷೆ ಜೊತೆಗೆ ಕೊಲೆಯಾದ ಕುಟುಂಬಕ್ಕೆ ಪರಿಹಾರವಾಗಿ 1 ಲಕ್ಷ ರೂ. ದಂಡದ ರೂಪದಲ್ಲಿ ನ್ಯಾಯಾಲಯವು ವಿಧಿಸಿತ್ತು. ನಂತರ ಇವರಿಗೆ ಸನ್ನಡತೆ ಆಧಾರದಲ್ಲಿ ನ.28 ರಂದು 2023 ರಲ್ಲಿ ದುರ್ಗಪ್ಪ ಅವರನ್ನು ಬಿಡುಗಡೆಗೊಳಿಸಲಾಗಿತ್ತು. ಆದರೆ ದಂಡದ ಹಣ 1 ಲಕ್ಷ ರೂ. ಕಟ್ಟಲು ಆಗಿರಲಿಲ್ಲ. ದಂಡ ಕಟ್ಟಿ ಕರೆದುಕೊಂಡು ಹೋಗಿ ಎಂದು ಸಹೋದರ, ಸಂಬಂಧಿಕರಿಗೆ ಕೆಲವೊಂದು ಎನ್‌ಜಿಒ ಗಳಿಗೆ ಹೇಳಿದರೂ ಸಫಲವಾಗಿಲ್ಲ.

ಈ ಸಂದರ್ಭದಲ್ಲಿ ಜೈಲಾಧಿಕಾರಿ ಡಾ.ಅನಿತಾ ಆರ್‌ ಕೈದಿಯನ್ನು ಲಿಂಗಸಗೂರಿಗೆ ಕಳಿಸಿ ತಾನೇ ದುಡಿದಿಟ್ಟ ಹಣವನ್ನು ಡ್ರಾ ಮಾಡಿಸಿಕೊಂಡು ಬರಲು ದಾರಿ ಮಾಡಿಕೊಟ್ಟರು. ಅನಂತರ ಜೈಲಿನಿಂದ ಹೊರಬಂದರೂ ಇವರನ್ನು ಬರಮಾಡಿಕೊಳ್ಳಲು ಯಾರೂ ಬರಲಿಲ್ಲ. ಅಸಾಹಾಯಕರಾಗಿ ನಿಂತಿದ್ದ ಇವರಿಗೆ ಮತ್ತೆ ಸಹಾಯ ಹಸ್ತ ಚಾಚಿದ್ದು, ಜೈಲಾಧಿಕಾರಿ ಡಾ. ಅನಿತಾ. ತನ್ನ ಸಿಬ್ಬಂದಿಯ ಜೊತೆ ಲಿಂಗಸೂರು ಬಸ್‌ ಹತ್ತಿಸಿ ಕಳಿಸಿದರು.