Home News Puttur: ಪರಿಶಿಷ್ಟ ಸಮುದಾಯದವರ ಪಾದ ತೊಳೆದು ಸಹಭೋಜನ ಮಾಡಿದ ಶಾಸಕ

Puttur: ಪರಿಶಿಷ್ಟ ಸಮುದಾಯದವರ ಪಾದ ತೊಳೆದು ಸಹಭೋಜನ ಮಾಡಿದ ಶಾಸಕ

Hindu neighbor gifts plot of land

Hindu neighbour gifts land to Muslim journalist

Puttur: ಪರಿಶಿಷ್ಟ ಸಮುದಾಯದವರ ಪಾದ ತೊಳೆದು ಅವರ ಜೊತೆ ಸಹಭೋಜನ ಮಾಡುವ ಮೂಲಕ ವಿಧಾನ ಪರಿಷತ್‌ ಸದಸ್ಯ ಕಿಶೋರ್‌ ಕುಮಾರ್‌ ಬೊಟ್ಯಾಡಿ ಅವರು ಸಂವಿಧಾನ ಅಭಿಯಾನ ಕಾರ್ಯಕ್ರಮ ನಡೆಸಿದ್ದಾರೆ. ಪುತ್ತೂರು ತಾಲೂಕಿನ ಸರ್ವೆ ಗ್ರಾಮದಲ್ಲಿರುವ ಕಿಶೋರ್‌ ಕುಮಾರ್‌ ಅವರ ಮನೆ “ಭಂಡಾರಿ ಫಾರ್ಮ್ಸ್‌ʼ ನಲ್ಲಿ ರಾತ್ರಿ “ಭೀಮ ಸಂಗಮʼ ಹೆಸರಿನಲ್ಲಿ ಭಾನುವಾರ ಈ ಅಭಿಯಾನ ಕಾರ್ಯಕ್ರಮವು ನಡೆದಿದೆ.

ಅಂದ ಹಾಗೆ ಈ ಕಾರ್ಯಕ್ರಮದಲ್ಲಿ 120 ದಲಿತ ದಂಪತಿಗಳು ಭಾಗವಹಿಸಿದ್ದರು. ಕಿಶೋರ್‌ ಕುಮಾರ್‌ ಬೊಟ್ಯಾಡಿ ಜೊತೆಗೆ ಇತರ ಬಿಜೆಪಿ ಮುಖಂಡರು ಸೇರಿ ಅವರ ಪಾದವನ್ನು ತೊಳೆದು, ಮುತ್ತೈದೆಯರು ಬಾಗಿನ ಸಮರ್ಪಿಸಿ ಆರತಿ ಬೆಳಗಿದರು. ನಂತರ ಎಲ್ಲರೂ ಸಹಭೋಜನ ಮಾಡಿದರು.

ಈ ಸಂದರ್ಭದಲ್ಲಿ ಕಿಶೋರ್‌ ಬೊಟ್ಯಾಡಿ ಅವರು, ” ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಆಶಯದಂತೆ ಸಮಾನತೆಯ ಸಮಾಜ ನಿರ್ಮಾಣ ಮಾಡುವುದು ನಮ್ಮ ಗುರಿ. ಇಲ್ಲಿ ಜಾತಿ ಮತ್ತು ಜಾತೀಯತೆಯ ಎಲ್ಲೆ ಮೀರಿ ಎಲ್ಲರೂ ಒಂದಾಗಿ ಕಳೆದಿದ್ದೇವೆ” ಎಂದು ಹೇಳಿದರು.