Guruvayuru : ಖಾಸಗಿ ಭಾಗದ ಕೂದಲು ಕಿತ್ತು ತುಳಸಿ ಗಿಡಕ್ಕೆ ಹಾಕಿ ವಿಕೃತ ನಗೆ ನಕ್ಕ ರೆಸ್ಟೋರೆಂಟ್ ಮಾಲಿಕ ಹಕೀಂ – ವಿಡಿಯೋ ವೈರಲ್

Guruvayuru: ಇತ್ತೀಚಿನ ದಿನಗಳಲ್ಲಿ ಹಿಂದೂಗಳ ಭಾವನೆಗೆ ಧಕ್ಕೆ ಆಗುವಂತಹ ಅನೇಕ ಕೆಲಸ ಕಾರ್ಯಗಳು ನಡೆಯುತ್ತಲೇ ಇವೆ. ಅಂತೆಯೇ ಇದೀಗ ಶ್ರೀಕೃಷ್ಣನ ಊರು ಎಂದೇ ಪ್ರಸಿದ್ಧವಾಗಿರುವ ಕೇರಳದ ಗುರುವಾಯೂರು ಕ್ಷೇತ್ರದ ಸಮೀಪ ಪ್ಯಾರಾಡೈಸ್ ಎನ್ನುವ ರೆಸ್ಟೋರೆಂಟ್ ಮಾಲಿಕ ಹಕೀಂ ತನ್ನ ಖಾಸಗಿ ಭಾಗದ ಕೂದಲು ಕಿತ್ತು ತುಳಸಿ ಗಿಡಕ್ಕೆ ಹಾಕುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

 

ಹೌದು, ಸಿಗರೇಟ್ ಸೇದುತ್ತಾ ದೂತನಂತೆ ಬರುವ ಈ ಹೋಟೆಲ್ ಮಾಲೀಕ ಯಾವ ಅಂಜಿಕೆ, ಅಳುಕು ಇಲ್ಲದೆ ಪಂಚೆ ಎತ್ತಿ ತನ್ನ ಖಾಸಗಿ ಭಾಗದ ಕೂದಲು ಕಿತ್ತು ತುಳಸಿ ಗಿಡಕ್ಕೆ ಹಾಕಿ ವಿಕೃತ ನಗೆ ನಕ್ಕು ಮುಂದೆ ಸಾಗುವ ದೃಶ್ಯವನ್ನು ಸಿಸಿಟಿವಿಯಲ್ಲಿ ಕಾಣಬಹುದಾಗಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನು ನೋಡಿದ ಹಿಂದೂಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಈ ವಿಡಿಯೋ ವೈರಲ್ ಆಗುತ್ತಿದ್ದಂತೇ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಂದು ಧರ್ಮವನ್ನು ಅಣಕಿಸುವ ರೀತಿಯ ಕೃತ್ಯವೆಸಗಿ ಶಾಂತಿಗೆ ಧಕ್ಕೆ ತರುವ ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಇದರ ಬೆನ್ನಲ್ಲೆ ಹಿಂದೂ ಐಕ್ಯ ವೇದಿ ಸಂಘಟನೆ ಹೋಟೆಲ್ ಮಾಲಿಕ ಹಕೀಂ ವಿರುದ್ಧ ಪೊಲೀಸರಿಗೆ ದೂರು ಸಲ್ಲಿಸಿದೆ.

Comments are closed.