Mumbai: ನಟ ಸುದೀಪ್‌ ಪಾಂಡೆ ಹೃದಯಾಘಾತದಿಂದ ನಿಧನ

Share the Article

Mumbai: ಭೋಜ್‌ಪುರಿ ಚಿತ್ರರಂಗದ ನಟ ಸುದೀಪ್‌ ಪಾಂಡೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಸುದೀಪ್‌ ಪಾಂಡೆ ತೀವ್ರ ಎದೆನೋವಿನಿಂದ ಬಳಲಿದ್ದ ಕಾರಣ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಸುದೀಪ್‌ ಪಾಂಡೆ ಭೋಜಪುರಿ ಸಿನಿಮಾರಂಗ ಮಾತ್ರವಲ್ಲದೇ, ಹಿಂದಿ ಸಿನಿಮಾದಲ್ಲೂ ಅಭಿನಯಿಸಿದ್ದಾರೆ. ನಟನಾಗಿ, ನಿರ್ದೇಶಕರಾಗಿ ಕೂಡಾ ಕೆಲಸ ಮಾಡಿದ್ದಾರೆ

ಖೂನಿದಂಗಲ್‌, ಭೋಜ್‌ಪುರಿ ಭಯ್ಯಾ, ಬಹಿನಿಯಾ ಸೇರಿ ಹಲವು ಸೂಪರ್‌ ಹಿಟ್‌ ಸಿನಿಮಾಗಳನ್ನು ನೀಡಿದ್ದಾರೆ. ಸಿನಿ ರಂಗಕ್ಕೆ ಎಂಟ್ರಿ ನೀಡುವ ಮೊದಲು ಸಾಫ್ಟ್‌ವೇರ್‌ ಇಂಜಿನಿಯರ್‌ ಆಗಿ ಕೆಲಸ ಮಾಡುತ್ತಿದ್ದರು.

Comments are closed.