Home News RBI: ದೇಶದಲ್ಲಿ 200ರೂ ನೋಟು ಬ್ಯಾನ್ ?! ಇದ್ದಕ್ಕಿದ್ದಂತೆ ಮಹತ್ವದ ಅಪ್ಡೇಟ್ ಕೊಟ್ಟ RBI!!

RBI: ದೇಶದಲ್ಲಿ 200ರೂ ನೋಟು ಬ್ಯಾನ್ ?! ಇದ್ದಕ್ಕಿದ್ದಂತೆ ಮಹತ್ವದ ಅಪ್ಡೇಟ್ ಕೊಟ್ಟ RBI!!

Hindu neighbor gifts plot of land

Hindu neighbour gifts land to Muslim journalist

RBI: ನೋಟು ಬದಲಾವಣೆಯ ವಿಚಾರವಾಗಿ ಅಥವಾ ನೋಟು ಹಿಂಪಡೆಯುವ ಕುರಿತಾಗಿ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಕೆಲವೊಂದು ಸುದ್ದಿಗಳು ವೈರಲಾಗುತ್ತಿವೆ. ಅಂತೆಯೇ 2000 ರೂಪಾಯಿ ಮುಖಬೆಲೆಯ ನೋಟುಗಳನ್ನ ರದ್ದುಪಡಿಸಿದ ರೀತಿಯಲ್ಲಿಯೇ 200 ರೂಪಾಯಿ ನೋಟನ್ನು ಹಿಂಪಡೆಯಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಕ್ರಮ ಕೈಗೊಳ್ಳಲಿದೆ ಎಂಬ ಸುದ್ದಿ ಕೂಡ ಸಾಕಷ್ಟು ದಿನಗಳಿಂದ ಸದ್ದು ಮಾಡುತ್ತಿದೆ. ಈ ಬಗ್ಗೆ RBI ಸಾರ್ವಜನಿಕರಿಗೆ ಸ್ಪಷ್ಟತೆ ನೀಡಿದೆ.

ಭಾರತದ ಮಾರುಕಟ್ಟೆಯಲ್ಲಿ ಅತ್ಯಂತ ಹೆಚ್ಚು ಚಲಾವಣೆ ಆಗುವ ನೋಟುಗಳು 500 ರೂಪಾಯಿ ಹಾಗೂ 200 ರೂಪಾಯಿ ನೋಟುಗಳು. ಬಹುತೇಕ ಎಲ್ಲರ ಜೇಬಿನಲ್ಲಿ 200 ರೂಪಾಯಿ ನೋಟು ಇರುತ್ತದೆ. ಆದರೆ ಇದೀಗ ಮೋದಿ ಸರ್ಕಾರವು 200 ರೂ ನೋಟನ್ನು ಹಿಂಪಡೆಯಲ್ಲಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಈ ಕುರಿತಂತೆ ಇದೀಗ ಇದ್ದಕ್ಕಿದ್ದಂತೆ ಆರ್‌ಬಿಐ ಬಿಗ್ ಅಪ್ಡೇಟ್ ಒಂದನ್ನು ನೀಡಿದೆ.

ಆರ್ಬಿಐ ಕೊಟ್ಟ ಸ್ಪಷ್ಟನೆ ಏನು?
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, 200 ರೂಪಾಯಿಯ ನೋಟುಗಳನ್ನು ಯಾವುದೇ ಕಾರಣಕ್ಕೂ ಹಿಂಪಡೆಯುವುದಿಲ್ಲ. ಅಲ್ಲದೆ 2000 ರೂಪಾಯಿ ನೋಟುಗಳನ್ನು ವಾಪಾಸ್‌ ಪಡೆದುಕೊಂಡ ನಂತರ, ದೇಶದಲ್ಲಿ 200 ಮತ್ತು 500 ರೂಪಾಯಿ ನಕಲಿ ನೋಟುಗಳು ನಿರಂತರವಾಗಿ ಹೆಚ್ಚುತ್ತಿವೆ. ಹೀಗಾಗಿ ವಹಿವಾಟಿನ ಸಮಯದಲ್ಲಿ ಹೆಚ್ಚುವರಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ.

ಜೊತೆಗೆ 200 ರೂಪಾಯಿ ನೋಟನ್ನು ಹೇಗೆ ಗುರುತಿಸಿ ಎಂದು ಸೂಚನೆ ನೀಡಿದೆ. ಅದೇನೆಂದರೆ ನೋಟಿನ ಎಡಭಾಗದಲ್ಲಿ ದೇವನಾಗರಿ ಲಿಪಿಯಲ್ಲಿ ಬರೆಯಲಾದ 200 ರೂ., ಮಧ್ಯದಲ್ಲಿ ಮಹಾತ್ಮ ಗಾಂಧಿಯವರ ಸ್ಪಷ್ಟ ಚಿತ್ರ, ಸೂಕ್ಷ್ಮ ಅಕ್ಷರಗಳಲ್ಲಿ ‘RBI’, ‘ಭಾರತ್’, ‘ಇಂಡಿಯಾ’ ಮತ್ತು ‘200’, ಬಲಭಾಗದಲ್ಲಿ ಅಶೋಕ ಸ್ತಂಭದ ಚಿಹ್ನೆ ಇರಬೇಕು ಎಂದು ಹೇಳಿದೆ.