Naxalite: 6 ನಕ್ಸಲರು ಶರಣಾಗತಿ ಆದ್ರೂ ಇನ್ನೂ ಯಾರ ಸಂಪರ್ಕಕ್ಕೂ ಸಿಗದೇ ತಲೆಮರೆಸಿಕೊಂಡಿದ್ದಾನೆ ಈ ಏಕೈಕ ನಕ್ಸಲ್!! ಯಾರೀತ?

Naxalite: ಕರ್ನಾಟಕದ ಇತಿಹಾಸದಲ್ಲೇ ಮೊದಲೆಂಬಂತೆ ಇತ್ತೀಚಿಗೆ ಆರು ಜನ ನಕ್ಸಲೆಟ್ ಗಳು ತಮ್ಮೆಲ್ಲ ಕೃತ್ಯಗಳನ್ನು ಬಿಟ್ಟು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಮ್ಮುಖದಲ್ಲಿ ಶರಣಾಗತಿಯಾಗಿ ಬಂಧನಕೊಳಗಾದರು. ಈ ಮೂಲಕ ನಕ್ಸಲ್ ಮುಕ್ತ ಕರ್ನಾಟಕ ಆಗಿದೆ ಎಂದು ಸಿದ್ದರಾಮಯ್ಯ ಅವರು ಘೋಷಣೆ ಹೊರಡಿಸಿದರು. ಆದರೆ ಇನ್ನೂ ಒಬ್ಬ ನಕ್ಸಲೆಟ್ ಯಾವ ಸಂಪರ್ಕಕ್ಕೂ ಬರದೆ ಕಾಡಿನಲ್ಲಿ ಉಳಿದುಕೊಂಡಿದ್ದಾರೆ ಎಂಬುದು ಅಚ್ಚರಿಯ ವಿಚಾರ.

 

ಹೌದು, 8 ನಕ್ಸಲರ ಪೈಕಿ ಇತ್ತೀಚೆಗೆ ವಿಕ್ರಂಗೌಡ ಎನ್​ಕೌಂಟರ್ ಮಾಡಲಾಗಿದೆ. 7 ಜನರ ಪೈಕಿ ನಿನ್ನೆ 6 ನಕ್ಸಲರ ಶರಣಾಗತಿಯಾಗಿದ್ದಾರೆ. ಆದರೆ ಏಕೈಕ ನಕ್ಸಲ್ ರವೀಂದ್ರ ಮಾತ್ರ ಶರಣಾಗಿಲ್ಲ. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಮೂಲದ ರವೀಂದ್ರ ವಿರುದ್ಧ 14 ಕೇಸ್​​ಗಳಿವೆ. ನಕ್ಸಲ್ ಶರಣಾಗತಿ ಕಮಿಟಿ ಸಂಪರ್ಕಕ್ಕೂ ಸಿಕ್ಕಿಲ್ಲ. ಕಳೆದ 18 ವರ್ಷಗಳಿಂದ ಭೂಗತವಾಗಿರುವ ನಕ್ಸಲ್​​ ರವೀಂದ್ರ, ಯಾರ ಸಂಪರ್ಕಕ್ಕೆ ಸಿಕ್ಕಿಲ್ಲ. ಆ ಮೂಲಕ ರಾಜ್ಯದ ನಕ್ಸಲರ ಪಟ್ಟಿಯಲ್ಲಿ ಉಳಿದುಕೊಂಡಿದ್ದಾರೆ.

Comments are closed, but trackbacks and pingbacks are open.