Mangaluru: ಮಂಗಳೂರಿನಲ್ಲಿ ಪಿಎಫ್‌ಐ ಮತ್ತೆ ಸಕ್ರಿಯ ಸಂಶಯ; ಆಟಿಕೆ ಪಿಸ್ತೂಲ್‌ ಡ್ರಾಮ ಮಾಡಿದ್ದು ಯಾಕೆ

Mangaluru: ಮಂಗಳೂರಿನ ವಾಮಂಜೂರಿನಲ್ಲಿ ಜ.6 ರಂದು ನಡೆದ ರಿವಾಲ್ವರ್‌ ಮಿಸ್‌ ಫೈರ್‌ ಪ್ರಕರಣವು ಭಾರೀ ಸಂಶಯಕ್ಕೆ ಕಾರಣವಾಗಿದೆ. ನಿಷೇಧಿತ ಪಿಎಫ್‌ಐ ಸಂಘಟನೆ ಮತ್ತೆ ಸಕ್ರಿಯವಾಗಿದೆಯಾ? ಎನ್ನುವ ಸಂಶಯ ಉಂಟಾಗಿದೆ. ನಿಷೇಧಿತ ಪಿಎಫ್‌ಐ ಸಂಘಟನೆಯ ಸದಸ್ಯ, ರೌಡಿಶೀಟರ್‌ ಅದ್ದು ಯಾನೆ ಬದ್ರುದ್ದೀನ್‌ ಅಕ್ರಮ ಪಿಸ್ತೂಲ್‌ ಬಳಕೆಯೇ ಈ ಅನುಮಾನಕ್ಕೆ ಕಾರಣವಾಗಿದೆ.

 

ಅದ್ದು ಯಾನೆ ಬದ್ರುದ್ದೀನ್‌ ಪಾಪ್ಯೂಲರ್‌ ಫ್ರಂಟ್‌ ಆಫ್‌ ಇಂಡಿಯಾದ ಸಕ್ರಿಯ ಸದಸ್ಯನಾಗಿದ್ದ. ವಾಮಂಜೂರಿನಲ್ಲಿ ಹಳೆ ವಸ್ತುಗಳ ಮಾರಾಟದ ಅಂಗಡಿ ಇಟ್ಟುಕೊಂಡಿದ್ದು, ಈತನ ಬಳಿ ಲೈಸೆನ್ಸ್‌ ಇಲ್ಲದೇ 9ಎಂಎಂ ಪಿಸ್ತೂಲ್‌ ತನ್ನಲ್ಲಿ ಇತ್ತು. ಪಿಎಫ್‌ಐನ ಇನ್ನೋರ್ವ ಸದಸ್ಯ ರೌಡಿಶೀಟರ್‌ ಇಮ್ರಾನ್‌ ಎಂಬಾತ ಪಿಸ್ತೂಲ್‌ ಕೊಟ್ಟಿರುವ ಕುರಿತು ವರದಿಯಾಗಿದೆ.

ರೌಡಿಶೀಟರ್‌ ಇಮ್ರಾನ್‌ ಕೇರಳದಿಂದ ಅಕ್ರಮವಾಗಿ ಪಿಸ್ತೂಲ್‌ ತರಿಸಿಕೊಂಡಿದ್ದು, ಅದನ್ನು ಅದ್ದುಗೆ ಕೊಟ್ಟಿದ್ದ. ಜ.6 ರ ಮಿಸ್‌ಫೈರ್‌ ಆಗಿರುವ ಕುರಿತು ಮಾಹಿತಿಗಳು ಮಾಧ್ಯಮದಲ್ಲಿ ಪ್ರಕಟವಾಯಿತು.

ಅದ್ದುವಿನ ಕೈಯಲ್ಲಿ ಮಿಸ್‌ಫೈರ್‌ ಆಗಿ ಅಂಗಡಿ ಹೊರಗೆ ನಿಂತಿದ್ದ ಧರ್ಮಗುರು ಸಫ್ವಾನ್‌ಗೆ ತಾಗಿತ್ತು. ಈ ವಿಚಾರ ಹೊರಗೆ ಬಂದರೆ ಅಪಾಯ ತಪ್ಪಿದ್ದಲ್ಲ ಎಂದು ಅರಿತ ಅದ್ದು ಮತ್ತು ಇಮ್ರಾನ್‌ ಕಥೆ ಕಟ್ಟಿದ್ದಾರೆ. ಸಫ್ವಾನ್‌ ಪೊಲೀಸರ ಬಳಿ ಸುಳ್ಳು ಹೇಳುವ ಹಾಗೆ ಮಾಡಿದ್ದರು. ಧರ್ಮಗುರು ಸಫ್ವಾನ್‌ ತಾನೇ ಗುಂಡು ಹೊಡೆದುಕೊಂಡು ಅದು ಆಟಿಕೆ ಪಿಸ್ತೂಲ್‌ ಎಂದುಕೊಂಡಿದ್ದೆ ಎಂದು ಪೊಲೀಸರಲ್ಲಿ ಹೇಳಿಕೆ ನೀಡಿದ್ದ. ಆದರೆ ತನಿಖೆಯಲ್ಲಿ ಎಫ್‌ಎಸ್‌ಎಲ್‌ ಹಾಗೂ ಬ್ಯಾಲೆಸ್ಟಿಕ್‌ ವರದಿಯಲ್ಲಿ ಸುಳ್ಳು ಹೇಳಿರುವುದು ಗೊತ್ತಾಗಿದೆ.

Comments are closed, but trackbacks and pingbacks are open.