Karnataka BJP: ಸೀಕ್ರೆಟ್ ಆಗಿ ದೆಹಲಿಯಲ್ಲಿ ಅಮಿತ್ ಶಾ ಬೇಟಿಯಾದ ಬಿಜೆಪಿ ನಾಯಕರು – ರಾಜ್ಯಾಧ್ಯಕ್ಷ ಸ್ಥಾನಕ್ಕೆ ಯಾರು ಊಹಿಸಿದ ಹೆಸರು ಸೂಚನೆ !!

Share the Article

Karnataka BJP: ಕರ್ನಾಟಕದ ಬಿಜೆಪಿಯಲ್ಲಿ ಅಸಮಾಧಾನ ಭುಗಿಲೆದ್ದಿದೆ. ಹಾಲಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ವಿರುದ್ಧ ಸ್ವಪಕ್ಷದವರೇ ತೊಡೆತಟ್ಟಿದ್ದಾರೆ. ಈ ವಿಚಾರ ದೆಹಲಿಯವರೆಗೂ ತಲುಪಿದ್ದು ಸಮಸ್ಯೆಯ ಸಂಕೋಲೆಯನ್ನು ಬಿಡಿಸಲು ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರೇ ಸ್ವತಹ ರಾಜ್ಯಕ್ಕೆ ಆಗಮಿಸಿದ್ದರು. ಆದರೂ ಈ ಸಮಸ್ಯೆ ಪರಿಹಾರವನ್ನು ಕಂಡಿಲ್ಲ. ಈಗ ರಾಜ್ಯ ಬಿಜೆಪಿಯ ರೆಬೆಲ್ಸ್ ನಾಯಕರು ದೆಹಲಿಯಲ್ಲಿ ಗೌಪ್ಯವಾಗಿ ಅಮಿತ್ ಶಾ ಅವರನ್ನು ಭೇಟಿಯಾಗಿ ಇವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಲು ಕೇಳಿದೆ ಎಂಬ ಸುದ್ದಿ ಬಂದಿದೆ.

ಹೌದು, ಕರ್ನಾಟಕ ಬಿಜೆಪಿಯೊಳಗೆ ಅಲ್ಲೋಲ ಕಲ್ಲೋಲ ಆಗುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ (BY Vijayendra) ಅವರದ್ದು ಒಂದು ಬಣವಾದರೆ, ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ನೇತೃತ್ವದಲ್ಲಿ ಮತ್ತೊಂದು ಬಣ ಆಯಕ್ಟಿವ್ ಆಗಿದೆ. ಯತ್ನಾಳ್ ನೇತೃತ್ವದ ಬಣ, ಸೋಮವಾರ ಜೆಪಿಸಿ ಅಧ್ಯಕ್ಷರ ಭೇಟಿಗಾಗಿ ದೆಹಲಿಗೆ ಪ್ರಯಾಣ ಬೆಳೆಸಿತ್ತು. ಈ ನಡುವೆ ಮಂಗಳವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ರೆಬಲ್ಸ್ ಟೀಂ ಭೇಟಿ ಮಾಡಿದೆ ಎನ್ನಲಾಗಿದೆ. ಭೇಟಿ ಮಾಡಿ ರಾಜ್ಯಾಧ್ಯಕ್ಷರನ್ನಾಗಿ ಇವರನ್ನು ಮಾಡಿ ಎಂದು ಸೂಚಿಸಿದ್ದಾರೆ ಎನ್ನಲಾಗಿದೆ. ಆ ವ್ಯಕ್ತಿಯೇ ಕುಮಾರ್ ಬಂಗಾರಪ್ಪ.

ಯಸ್, ಒಬಿಸಿ ಕೋಟಾದಡಿ ಕುಮಾರ್ ಬಂಗಾರಪ್ಪಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ನೀಡುವಂತೆ ಅಮಿತ್ ಶಾ ಮುಂದೆ ರೆಬಲ್ಸ್ ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿದುಬಂದಿದೆ. ವಕ್ಫ್​ ಹೋರಾಟದ ವರದಿ ಬಗ್ಗೆಯೂ ಅಮಿತ್ ಶಾ ಅವರಿಗೆ ಮಾಹಿತಿ ರೆಬಲ್ಸ್ ಮಾಹಿತಿ ನೀಡಿದ್ದು, ವಕ್ಫ್​ ಹೋರಾಟಕ್ಕೆ ಬಿಜೆಪಿ ರೆಬಲ್ಸ್‌ಗಳಿಗೆ ಅಮೀತ್ ಶಾ ಶಹಬ್ಬಾಸ್ ಎಂದಿದ್ದಾರೆ. ಅಲ್ಲದೆ ತಾಲೂಕು ಹಂತದಲ್ಲಿ ವಕ್ಫ್​ ಹೋರಾಟ ಕೊಂಡೊಯ್ಯುವಂತೆ ಅಮೀತ್ ಶಾ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

Comments are closed.