Vishal : ನಟ ವಿಶಾಲ್ ನಡುಗುತ್ತಾ, ತೊದಲುತ್ತಾ ಮಾತನಾಡಿದ ವಿಚಾರ – ಲವ್ ಫೇಲ್ಯೂರ್, ಸ್ನೇಹಿತರಿಂದ ದ್ರೋಹ, ಸಾಲ, ಮೆಡಿಸಿನ್ ಇದಕ್ಕೆಲ್ಲಾ ಕಾರಣ? ಹೊರಬಿತ್ತು ಸ್ಫೋಟಕ ಸಂಗತಿ
Vishal: ಕಾಲಿವುಡ್ ನಟ ವಿಶಾಲ್(Vishal) ಅವರು ಇತ್ತೀಚೆಗೆ ಇವೆಂಟ್ (Event) ಒಂದರಲ್ಲಿ ಕಾಣಿಸಿಕೊಂಡಾಗ ಅವರ ಕೈ ಸಂಪೂರ್ಣವಾಗಿ ನಡುಗುತ್ತಿರುವುದು ಕಂಡು ಬಂದಿದೆ. ಇದನ್ನು ನೋಡಿದ ಅವರ ಅಭಿಮಾನಿಗಳು ಆತಂಕಗೊಂಡಿದ್ದರು. ಈ ಕುರಿತು ಅಪೋಲೋ ಆಸ್ಪತ್ರೆ ವೈದ್ಯರು ಸ್ಪಷ್ಟೀಕರಣ ನೀಡಿದ್ದು ಅವರ ಆರೋಗ್ಯ ಸಮಸ್ಯೆಯೇ ಇದಕ್ಕೆ ಕಾರಣ ಎಂದಿದ್ದರು. ಆದರೆ ಈಗ ಇದರ ಹಿಂದೆ ಬೇರೆಯೇ ವಿಚಾರ ಇದ್ದು ಲವ್ ಫೇಲ್ಯೂರ್, ಸ್ನೇಹಿತರಿಂದ ದ್ರೋಹ, ಸಾಲ, ಮೆಡಿಸಿನ್ ವಿಶಾಲ್ ಅವರ ಈ ಸ್ಥಿತಿಗೆ ಕಾರಣ ಎನ್ನಲಾಗುತ್ತಿದೆ.
ಹೌದು, ತಮಿಳಿನಲ್ಲಿ ಮಾಸ್ ಸಿನಿಮಾಗಳನ್ನು ನೀಡಿದ ವಿಶಾಲ್ ಇದೀಗ ತಮ್ಮದೇ ಅಭಿನಯದ ‘ಮದ ಗಜ ರಾಜ’ ಸಿನಿಮಾ ರಿಲೀಸ್ ಸಂಭ್ರಮದಲ್ಲಿದ್ದಾರೆ. ಇದೇ ಸಿನಿಮಾದ ಪ್ರಮೋಷನ್ ಕಾರ್ಯಕ್ರಮಕ್ಕೆ ಅವರು ಬಂದಿದ್ದರು. ವೇದಿಕೆಯಲ್ಲಿ ಅವರನ್ನು ಕರೆದು ಮಾತನಾಡಲು ಮೈಕ್ ನೀಡಿದಾಗ ವಿಶಾಲ್ ಅಕ್ಷರಶಃ ನಡುಗುತ್ತಿದ್ದರು. ಕೊನೆಗೆ ಅವರು ಎದ್ದು ನಿಲ್ಲಲೂ ಆಗುತ್ತಿಲ್ಲ ಎಂದಾಗ ಸಹಾಯಕರು ಬಂದು ಅವರನ್ನು ಸೋಫಾ ಮೇಲೆ ಕೂರಿಸಿದರು. ಬಳಿಕ ಕುಳಿತುಕೊಂಡೇ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ವೈರಲ್ ಆದ ವಿಡಿಯೋದಲ್ಲಿ ಸಿನಿಮಾದ ಬಗ್ಗೆ ಮಾತನಾಡುವಾಗ ಅವರ ಕೈಗಳು ನಡಗುತ್ತಿರುವುದು ಹಾಗೂ ಮಾತನಾಡಲು ತೊದಲಿದ್ದಾರೆ. ಅಲ್ಲದೆ ತೀವ್ರವಾಗಿ ಆಯಾಸ ಹಾಗೂ ನಿಶಕ್ತರಾಗಿರುವಂತೆ ವಿಡಿಯೋದಲ್ಲಿ ಇದೆ. ಅವರು ಸ್ಟೇಜ್ ಮೇಲೆ ಮಾತನಾಡುವುದಕ್ಕೆ ಕಷ್ಟಪಡುತ್ತಿರುವುದನ್ನು ನೋಡಿರುವ ನಿರೂಪಕರು ಸ್ಟೇಜ್ ಮೇಲೆ ಸಂವಾದವನ್ನು ಮಾಡುವಂತೆ ಕಾರ್ಯಕ್ರಮವನ್ನು ತುಸು ಬದಲಾಯಿಸಿದ್ದರು. ಅವರು ಕುಳಿತುಕೊಳ್ಳುವಾಗಲೂ ತಮಿಳಿನ ಇನ್ನೊಬ್ಬ ನಟರು ಸಹಾಯ ಮಾಡಿರುವುದು ವಿಡಿಯೋದಲ್ಲಿ ಇದೆ. ಇದನ್ನು ನೋಡಿ ಅಭಿಮಾನಿಗಳು ವಿಶಾಲ್ ಗೆ ನಿಜವಾಗಿಯೂ ಏನಾಗಿದೆ? ಯಾಕೆ ಅವರು ಹೀಗೆ ನಡುಗುತ್ತಿದ್ದಾರೆ ಎಂದು ಪ್ರಶ್ನೆ ಮಾಡಿದ್ದರು.
ಆಸ್ಪತ್ರೆ ನೀಡಿದ ಸ್ಪಷ್ಟೀಕರಣ:
ಚೆನ್ನೈನ ಅಪೋಲೋ ಆಸ್ಪತ್ರೆ ವಿಶಾಲ್ ಆರೋಗ್ಯದ ಬಗ್ಗೆ ವರದಿ ನೀಡಿದೆ. ಅದರ ಪ್ರಕಾರ ನಟ ವಿಶಾಲ್ಗೆ ವೈರಲ್ ಜ್ವರ ಇರುವುದು ದೃಢಪಟ್ಟಿದೆ. ಸೂಕ್ತ ಚಿಕಿತ್ಸೆ ಹಾಗೂ ಸಂಪೂರ್ಣ ವಿಶ್ರಾಂತಿಯನ್ನು ಪಡೆಯಲು ವೈದ್ಯಾಧಿಕಾರಿಗಳು ಸೂಚಿಸಿದ್ದಾರೆಂದು ಅಪೋಲೋ ಆಸ್ಪತ್ರೆ ವರದಿಯಲ್ಲಿ ತಿಳಿಸಲಾಗಿದೆ. ವಿಶಾಲ್ ಅವರಿಗೆ ಗಂಭೀರವಾದ ಸಮಸ್ಯೆ ಏನಿಲ್ಲ. ಜ್ವರದಿಂದ ಮಾತ್ರ ಬಳಲುತ್ತಿದ್ದಾರೆ. ಹೀಗಾಗಿ ಕಾರ್ಯಕ್ರಮದಲ್ಲಿಯೂ ಬಳಲಿದ್ದಾರೆ ಎಂದು ಹೇಳಿತ್ತು.
ಆಸ್ಪತ್ರೆ ಈ ರೀತಿಯ ಸ್ಪಷ್ಟೀಕರಣ ನೀಡಿದ ಬಳಿಕ ಅಭಿಮಾನಿಗಳೆಲ್ಲರೂ ನಿಟ್ಟಿಸಿರುಬಿಟ್ಟಿದ್ದರು. ಆದರೆ ಈ ಬೆನ್ನೆಲು ಚಿಯಾರು ಬಾಲು ಅವರು ಕೆಲವು ಅಚ್ಚರಿ ವಿಚಾರಗಳನ್ನು ತೆರೆದಿಟ್ಟ ವಿಡಿಯೋ ಒಂದು ವೈರಲಾಗುತ್ತಿದೆ
ಚಿಯಾರು ಬಾಲು ಹೇಳಿದ್ದೇನು?
ವಿಶಾಲ್ ಅವರು ಒತ್ತಡ ಮತ್ತು ಉದ್ವೇಗಕ್ಕೆ ಒಳಗಾಗಿ ಅದರಿಂದ ಹೊರ ಬರಲು ಸಾಕಷ್ಟು ಔಷಧಿಯನ್ನು ತೆಗೆದುಕೊಳ್ಳುತ್ತಿರಬಹುದು. ಈ ಹಿಂದೆ ವಿಶಾಲ್ನನ್ನು ಒಮ್ಮೆ ಭೇಟಿಯದಾಗ ಒತ್ತಡಕ್ಕೆ ಸಾಕಷ್ಟು ಔಷಧಿ ತೆಗೆದುಕೊಳ್ಳುತ್ತಿರುವುದಾಗಿ ಹೇಳಿದ್ದರು. ಆದರೆ, ಆ ಸಮಯದಲ್ಲಿ ನಾನು ಅದನ್ನು ಗಟ್ಟಿಯಾಗಿ ಹೇಳಲಿಲ್ಲ. ಸಾಲಗಳು, ವಿಫಲವಾದ ಪ್ರೀತಿ, ಸ್ನೇಹಿತರಿಂದ ಮೋಸ ಮತ್ತು ಅವರ ಚಿತ್ರಗಳ ಸೋಲು ಅವರನ್ನು ಕಾಡುತ್ತಿರಬೇಕು. ಸ್ಟಾರ್ ಆದರೂ ವಿಶಾಲ್ ಕೂಡ ಮನುಷ್ಯರೇ ತಾನೆ. ತನ್ನ ದೇಹವನ್ನು ಫಿಟ್ ಆಗಿಟ್ಟುಕೊಳ್ಳಲು ವಿಶಾಲ್ ಅವರು ಸ್ಟಿರಾಯ್ಡ್ ಬಳಸುತ್ತಿರಬಹುದು ಎಂದು ಹೇಳಿದ್ದಾರೆ.
ಅಲ್ಲದೆ ವಿಶಾಲ್ ಅವರು ನಿರ್ದೇಶಕ ಬಾಲ ನಿರ್ದೇಶನದ ಅವನ್ ಇವನ್ ಸಿನಿಮಾದಲ್ಲಿ ಓರೆಗಣ್ಣಿನ ವ್ಯಕ್ತಿಯಾಗಿ ನಟಿಸಿದ್ದಾರೆ. ಇದಕ್ಕಾಗಿ ವಿಶಾಲ್ ಅವರು ನಿರ್ದೇಶಕರ ಬಲವಂತದಿಂದ ಕಣ್ಣಿನ ಆಪರೇಷನ್ಗೆ ಒಳಗಾಗಿದ್ದರು. ಇದರ ನಂತರ ಕಣ್ಣಿನ ಸಮಸ್ಯೆಗಳು ಶುರುವಾಯಿತು. ದೃಷ್ಟಿಯು ಕೂಡ ಮಂಜಾಯಿತು. ಹೀಗಾಗಿ ವಿಶಾಲ್ ಅವರು ಹೆಚ್ಚಿನ ಶಕ್ತಿಯ ಕನ್ನಡಕವನ್ನು ಧರಿಸಲು ಶುರು ಮಾಡಿದರು. ವಿಶಾಲ್ ಕಣ್ಣುಗಳಿಂದ ಆಗಾಗ ನೀರು ಸುರಿಯುತ್ತದೆ. ಇದು ಖಂಡಿತ ಜ್ವರವಲ್ಲ. ಜ್ವರವಾಗಿದ್ದರೆ, ಸಾರ್ವಜನಿಕವಾಗಿ ಕಾಣಿಸಿಕೊಳ್ಳಲು ವೈದ್ಯರು ಖಂಡಿತ ಅನುಮತಿ ನೀಡುತ್ತಿರಲಿಲ್ಲ. ವಿಶಾಲ್ಗೆ ಬೇರೇನೋ ಸಮಸ್ಯೆ ಇದೆ. ಅವರು ಆದಷ್ಟು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಚಿಯಾರು ಬಾಲು ಹೇಳಿದ್ದಾರೆ.
Comments are closed, but trackbacks and pingbacks are open.