Gold Suresh: ಕೊಟ್ಟ ಮಾತಂತೆ ಧನರಾಜ್ ಮನೆಗೆ ಹೋಗಿ ಮರೆಯಲಾಗದ ಗಿಫ್ಟ್ ನೀಡಿದ ಗೋಲ್ಡ್ ಸುರೇಶ್ !!

Share the Article

Gold Suresh: ಬಿಗ್ ಬಾಸ್ ಮನೆಯಿಂದ ಇದ್ದಕ್ಕಿದ್ದಂತೆ ಹೊರಬಂದ ಗೋಲ್ಡ್ ಸುರೇಶ್ (Gold Suresh) ಅವರು ಇದೀಗ ತಮ್ಮ ಸಹಸ್ಪರ್ಧಿಯಾಗಿದ್ದ ಧನರಾಜ್‌ ಮನೆಗೆ ತೆರಳಿ ಮರೆಯಲಾರದ ಸರ್‌ಪ್ರೈಸ್‌ವೊಂದನ್ನು ನೀಡಿದ್ದಾರೆ.

ಹೌದು, ವ್ಯವಹಾರಗಳಲ್ಲಿ ನಷ್ಟ ಉಂಟಾದ ಕಾರಣ ಇದ್ದಕ್ಕಿದ್ದಂತೆ ಬಿಗ್ ಬಾಸ್ ಮನೆಯಿಂದ ಹೊರಬಂದ ಗೋಲ್ಡ್ ಸುರೇಶ್ ಅವರು ಹೊರಗಡೆ ಬಂದಿರುವಂತಹ ತಮ್ಮ ಎಲ್ಲಾ ಸಹಸ್ಪರ್ಧಿಗಳನ್ನು ಭೇಟಿಯಾಗಿ ಸಂತಸದ ಕ್ಷಣಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅಂತೆಯೆ ಇದೀಗ ಕೊಟ್ಟ ಮಾತಿನಂತೆ ಧನರಾಜ್ ಅವರ ಮನೆಗೆ ಭೇಟಿ ನೀಡಿ ಅವರ ಮಗಳಿಗೆ ತೊಟ್ಟಿಲನ್ನು ಉಡುಗೊರೆಯಾಗಿ ನೀಡಿದ್ದಾರೆ.

ಧನರಾಜ್-ಪ್ರಜ್ಞಾ ದಂಪತಿಗೆ ಸೆಪ್ಟೆಂಬರ್‌ನಲ್ಲಿ ಹೆಣ್ಣು ಮಗು ಜನಿಸಿತ್ತು. ಇದಾದ ಬಳಿಕ ಧನರಾಜ್‌ ಬಿಗ್‌ಬಾಸ್‌ ಮನೆ ಸೇರಿಕೊಂಡಿದ್ದರು. ಆಗಾಗ ತನ್ನ ಪಾಪುವನ್ನು ಧನರಾಜ್‌ ನೆನೆಯುತ್ತಲೇ ಇದ್ದರು. ಈ ವೇಳೆ ಸ್ನೇಹಿತ ಗೋಲ್ಡ್‌ ಸುರೇಶ್‌ ಅವರು ಧನರಾಜ್‌ ಮಗಳಿಗೆ ಗಿಫ್ಟ್‌ ನೀಡುವುದಾಗಿ ಭರವಸೆ ಕೊಟ್ಟಿದ್ದರು. ಅದರಂತೆ ಗೋಲ್ಡ್‌ ಸುರೇಶ್‌ ಅವರು ಧನರಾಜ್‌ ಅವರ ನಿವಾಸಕ್ಕೆ ಭೇಟಿ ನೀಡಿ, ಪಾಪುವನ್ನು ಮುದ್ದಾಡಿದ್ದಾರೆ. ಕೊಟ್ಟ ಮಾತಿನಂತೆ ಧನರಾಜ್‌ ಮಗಳಿಗೆ ತೊಟ್ಟಿಲನ್ನು ಉಡುಗೊರೆಯಾಗಿ ನೀಡಿದ್ದಾರೆ.

ತೊಟ್ಟಿಲನ್ನು ಖರೀದಿಸಿ ನೇರವಾಗಿ ಧನರಾಜ್‌ ಮನೆಗೆ ಹೋಗಿರುವ ಗೋಲ್ಡ್‌ ಸುರೇಶ್‌ ಅವರು ಕುಟುಂಬವನ್ನು ಭೇಟಿಯಾಗಿದ್ದಾರೆ. ಇದು ಮಾವನ ಕಡೆಯಿಂದ ಧನರಾಜ್‌ ಮಗಳಿಗೆ ಪುಟ್ಟ ಉಡುಗೊರೆ ಎಂದು ತೊಟ್ಟಿಲು ನೀಡಿದ್ದಾರೆ. ಈ ವಿಡಿಯೋ ವೈರಲ್‌ ಆಗಿದೆ.

Comments are closed.