Home News Sourav Ganguly daughter accident : ಸೌರವ್ ಗಂಗೂಲಿ ಪುತ್ರಿ ಕಾರು ಅಪಘಾತ; ಬಸ್‌ ಡ್ರೈವರ್‌...

Sourav Ganguly daughter accident : ಸೌರವ್ ಗಂಗೂಲಿ ಪುತ್ರಿ ಕಾರು ಅಪಘಾತ; ಬಸ್‌ ಡ್ರೈವರ್‌ ಪರಾರಿ

Hindu neighbor gifts plot of land

Hindu neighbour gifts land to Muslim journalist

Sourav Ganguly daughter accident : ಶುಕ್ರವಾರ ಸಂಜೆ ಕೋಲ್ಕತ್ತಾದ ಡೈಮಂಡ್ ಹಾರ್ಬರ್ ರಸ್ತೆಯಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರ ಪುತ್ರಿ ಸನಾ ಗಂಗೂಲಿ ಅವರ ಕಾರಿಗೆ ಬಸ್ಸೊಂದು ಡಿಕ್ಕಿ ಹೊಡೆದಿದೆ. ಆದರೆ, ಈ ಅಪಘಾತದಲ್ಲಿ ಸನಾ ಗಂಗೂಲಿ ಗಾಯಗೊಂಡಿಲ್ಲ. ಕಾರು ಚಾಲಕನಿಗೆ ಕೂಡಾ ಏನೂ ಆಗಿಲ್ಲ. ಈ ಅಪಘಾತದಲ್ಲಿ ಸನಾ ಅವರ ಕಾರು ಸ್ವಲ್ಪ ಜಖಂಗೊಂಡಿದೆ.

ಸನಾ ತನ್ನ ಕಾರಿನಲ್ಲಿ ಚಾಲಕನ ಪಕ್ಕದ ಸೀಟಿನಲ್ಲಿ ಕುಳಿತಿದ್ದು, ಬೆಹಾಲಾ ಚೌರಸ್ತಾ ಬಳಿ ಬಂದಾಗ ಕಾರು ಬಸ್ಸಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ನಂತರ, ಬಸ್ ಚಾಲಕ ಸ್ಥಳದಿಂದ ಓಡಿ ಹೋಗಿದ್ದು, ಆದರೆ ಸನಾ ಗಂಗೂಲಿ ಮತ್ತು ಅವರ ಕಾರಿನ ಚಾಲಕ ಅವನನ್ನು ಹಿಂಬಾಲಿಸಿ ಸಖರ್ ಬಜಾರ್ ಬಳಿ ಹಿಡಿದಿದ್ದಾರೆ.

ಮೂಲಗಳ ಪ್ರಕಾರ ಸನಾ ಅವರ ಮರ್ಸಿಡಿಸ್ ಬೆಂಜ್ ಕಾರಿಗೆ ಬಸ್ ಡಿಕ್ಕಿಯಾಗಿ ಸಣ್ಣಪುಟ್ಟ ಹಾನಿಯಾಗಿದೆ. ಘಟನೆಯ ನಂತರ ಸನಾ ಗಂಗೂಲಿ ಪೊಲೀಸರಿಗೆ ದೂರು ನೀಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಬಸ್ ಚಾಲಕನನ್ನು ಬಂಧಿಸಿ ಆತನ ವಿರುದ್ಧ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.