Bangalore: ʼನಮ್ಮ ಯಾತ್ರಿʼ ಚಾಲಕನಿಂದ ಮದ್ಯ ಸೇವನೆ, ಚಲಿಸುತ್ತಿದ್ದ ಆಟೋದಿಂದ ಜಿಗಿದ ಮಹಿಳೆ

Share the Article

Bangalore: ಮಹಿಳೆಯೊಬ್ಬರು ಚಲಿಸುತ್ತಿದ್ದ ಆಟೋರಿಕ್ಷಾದಿಂದ ಕುಡಿದ ಅಮಲಿನಲ್ಲಿದ್ದ ಚಾಲಕನಿಂದ ರಕ್ಷಿಸಲು ಜಿಗಿದ ಘಟನೆಯೊಂದು ಗುರುವಾರ ರಾತ್ರಿ ಬೆಂಗಳೂರಿನಲ್ಲಿ ನಡೆದಿದೆ.

ಮಹಿಳೆ ಹೊರಮಾವು-ಥಣಿಸಂದ್ರಕ್ಕೆ ಆಟೋರಿಕ್ಷಾವನ್ನು ʼನಮ್ಮ ಯಾತ್ರಿʼ ಮೂಲಕ ಬುಕ್‌ ಮಾಡಿದ್ದಾರೆ ಎಂದು ಘಟನೆಯ ನಂತರ ಮಹಿಳೆಯ ಪತಿ ಹೇಳಿದ್ದಾರೆ.

ನನ್ನ ಪತ್ನಿ ಹೊರಮಾವುನಿಂದ ಥಣಿಸಂದ್ರಕ್ಕೆ ಆಟೋ ಬುಕ್‌ ಮಾಡಿದ್ದು, ಆದರೆ ಡ್ರೈವರ್‌ ಕುಡಿದು ಹೆಬ್ಬಾಳದ ಬಳಿ ತಪ್ಪಾದ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದಾನೆ. ಪತ್ನಿ ಪದೇ ಪದೇ ನಿಲ್ಲಿಸಲು ಕೇಳಿದರೂ ಕೇಳಲಿಲ್ಲ. ಕೂಡಲೇ ಚಲಿಸುತ್ತಿದ್ದ ಆಟೋದಿಂದ ಆಕೆ ಜಿಗಿದಿದ್ದಾಳೆ ಎಂದು ಶುಕ್ರವಾರ x ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ನಮ್ಮ ಯಾತ್ರಿ ಕಸ್ಟಮರ್‌ ಕೇರ್‌ ನಂಬರ್‌ ಕೂಡಾ ಇಲ್ಲ ಎಂದು ವ್ಯಕ್ತಿ ದೂರಿದ್ದಾರೆ. ಪತಿ ಪೊಲೀಸರಿಗೆ ದೂರನ್ನು ನೀಡಿ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಇತ್ತ ದೂರಿಗೆ ಪ್ರತಿಕ್ರಿಯೆ ನೀಡಿದ ನಮ್ಮ ಯಾತ್ರಿ, ನಿಮ್ಮ ಪತ್ನಿಗೆ ಉಂಟಾದ ಅನಾನುಕೂಲತೆಗೆ ನಾವು ವಿಷಾದಿಸುತ್ತೇವೆ ಎಂದು ಹೇಳಿದ್ದು, ನಮಗೆ ಸವಾರಿಯ ವಿವಿರ ಡಿಎಂ ಮಾಡಿ ಎಂದು ಹೇಳಿದೆ.

Comments are closed.