Home News Putturu: ಪುತ್ತಿಲ ಪರಿವಾರದಲ್ಲಿದ್ದ ಯುವಕನಿಂದ ಹಿಂದೂ ಮುಖಂಡನಿಗೆ ಬೆದರಿಕೆ !! ಪುತ್ತೂರಿನಲ್ಲಿ ಮತ್ತೆ ಭುಗಿಲೆದ್ದಿತೆ ಒಳಜಗಳ?

Putturu: ಪುತ್ತಿಲ ಪರಿವಾರದಲ್ಲಿದ್ದ ಯುವಕನಿಂದ ಹಿಂದೂ ಮುಖಂಡನಿಗೆ ಬೆದರಿಕೆ !! ಪುತ್ತೂರಿನಲ್ಲಿ ಮತ್ತೆ ಭುಗಿಲೆದ್ದಿತೆ ಒಳಜಗಳ?

Hindu neighbor gifts plot of land

Hindu neighbour gifts land to Muslim journalist

Putturu : ಪುತ್ತಿಲ ಪರಿವಾರದಲ್ಲಿ ಗುರುತಿಸಿಕೊಂಡಿದ್ದ ಯುವಕನೊಬ್ಬ ಹಿಂದೂ ಜಾಗರಣ ವೇದಿಕೆ ಮುಖಂಡನಿಗೆ ಬೆದರಿಕೆ ನೀಡಿದ್ದಾನೆ ಎಂದು ಆರೋಪಿಸಲಾಗಿದೆ.

ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕರಾವಳಿ ಭಾಗದಲ್ಲಿ ಭಾರಿ ಸದ್ದು ಮಾಡಿದಂತಹ ಪುತ್ತಿಲ ಪರಿವಾರ ನಂತರದ ದಿನಗಳಲ್ಲಿ ಬಿಜೆಪಿಯೊಂದಿಗೆ ವಿಲೀನವಾಯಿತು. ಇದರ ಮುಖ್ಯಸ್ಥರಾಗಿದ್ದ ಅರುಣ್ ಕುಮಾರ್ ಪುತ್ತಿಲ(Arun Kumar Puttila) ಅವರು ಬಿಜೆಪಿ ನಾಯಕರಾಗಿ ಗುರುತಿಸಿಕೊಂಡರು. ಆದರೆ ಇದೀಗ ಪುತ್ತಿಲ ಪರಿವಾರದಲ್ಲಿ ಗುರುತಿಸಿಕೊಂಡಿದ್ದ ಯುವಕನೊಬ್ಬ ಹಿಂದೂ ಜಾಗರಣ ವೇದಿಕೆ ಮುಖಂಡನಿಗೆ ಬೆದರಿಕೆ ನೀಡಿದ್ದಾನೆ ಎಂದು ಆರೋಪವೊಂದು ಕೇಳಿಬಂದಿದೆ.

ಹೌದು, ಪುತ್ತೂರಿನ ಮುಕ್ವೆ ನಿವಾಸಿ, ಹಿಂದೂ ಜಾಗರಣ ವೇದಿಕೆ ಮುಖಂಡ ಸುಭಾಶ್ ರೈ ಎಂಬ ವ್ಯಕ್ತಿಗೆ, ಮುಂಡೂರು ನಿವಾಸಿ ಧನಂಜಯ ಕಲ್ಲಮ ಎಂಬಾತ ಬೆದರಿಕೆ ಒಡ್ಡಿದ್ದಾನೆ ಎನ್ನಲಾಗಿದ್ದು, ಈ ಬಗ್ಗೆ ಸುಭಾಶ್‌ ರೈ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ವರದಿಯಾಗಿದೆ. ಧನಂಜಯ ಬೆದರಿಕೆ ಕರೆ ಮಾಡಿರುವುದಲ್ಲದೆ ಮೊಬೈಲ್ ನಂಬರ್ ಇತರರಿಗೂ ನೀಡಿ ಬೆದರಿಕೆಗೆ ಪ್ರಚೋದಿಸಲಾಗಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಸುಭಾಶ್‌ ರೈ ಹಲವಾರು ಬೆದರಿಕೆ ಕರೆಗಳಿಂದ ರಕ್ಷಣೆ ನೀಡುವಂತೆ ಪೋಲೀಸರಿಗೆ ಮನವಿ ಮಾಡಿದ್ದಾರೆ.

ಅಂದಹಾಗೆ ಅರುಣ್‌ ಕುಮಾರ್ ಪುತ್ತಿಲ ಬಿಜೆಪಿ ಸೇರ್ಪಡೆ ನಂತರ ಪುತ್ತಿಲ ಪರಿವಾರದಲ್ಲಿ ಒಳಗೊಳಗೆ ಜಗಳ ಉಂಟಾಗಿತ್ತು. ಆದರೆ ಕೆಲದಿನಗಳಿಂದ ಹಿಂದೂ ಸಂಘಟನೆಯಾಗಲಿ, ಪುತ್ತಿಲ ಪರಿವಾರವಾಗಲಿ ಯಾವುದೇ ಸುದ್ದಿಯಲ್ಲಿರಲಿಲ್ಲ. ಆದ್ರೆ ಇದೀಗ ಬೂದಿ ಮುಚ್ಚಿದ ಕೆಂಡದಂತಿದ್ದ ಹಿಂದೂ ಸಂಘಟನೆ ಮತ್ತು ಪುತ್ತಿಲ ಪರಿವಾರ ಸಂಘಟನೆಗಳ ಒಳಜಗಳ ಮತ್ತೆ ಆರಂಭದ ಸೂಚನೆ ನೀಡಿದಂತಾಗಿದೆ.