Home News Mangaluru : ‘ಮಂಗಳೂರು ಸ್ಟ್ರೀಟ್ ಫುಡ್ ಫಿಯೆಸ್ಟ್‌’ಗೆ ಡೇಟ್ ಫಿಕ್ಸ್ – ಇಲ್ಲಿದೆ ಕಾರ್ಯಕ್ರಮದ ಕಂಪ್ಲೀಟ್...

Mangaluru : ‘ಮಂಗಳೂರು ಸ್ಟ್ರೀಟ್ ಫುಡ್ ಫಿಯೆಸ್ಟ್‌’ಗೆ ಡೇಟ್ ಫಿಕ್ಸ್ – ಇಲ್ಲಿದೆ ಕಾರ್ಯಕ್ರಮದ ಕಂಪ್ಲೀಟ್ ಡೀಟೇಲ್ಸ್

Hindu neighbor gifts plot of land

Hindu neighbour gifts land to Muslim journalist

Mangaluru : ಸ್ಟ್ರೀಟ್‌ನಲ್ಲಿ ನಿಂತ್ಕೊಂಡು ತಮಗಿಷ್ಟವಾದ ಫುಡ್‌ ಸವಿಯೋದು ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಅದರಲ್ಲೂ ಒಂದೇ ಜಾಗದಲ್ಲಿ ಸ್ಥಳೀಯ ಮಾತ್ರವಲ್ಲದೇ ರಾಜ್ಯ ಹೊರರಾಜ್ಯಗಳ ಬಹುಬೇಡಿಕೆಯ ವಿವಿಧ ಶೈಲಿಯ ಆಹಾರ ಮಳಿಗೆಗಳು ಸಿಕ್ರೆ ಅದಕ್ಕಿಂತ ಹೆಚ್ಚು ಬೇರೆನೂ ಬೇಕು ಅಲ್ವಾ. ಅಂತೆಯೇ ಇದೀಗ ಮಂಗಳೂರಿನ ಜನತೆಗೆ ಮತ್ತೆ ಈ ಸುವರ್ಣ ಅವಕಾಶ ಬಂದೊದಗಿದ್ದು ‘ಮಂಗಳೂರು ಸ್ಟ್ರೀಟ್ ಫುಡ್ ಫಿಯೆಸ್ಟ್‌ಗೆ'( Mangaluru street food fiest) ದಿನಾಂಕ ನಿಗದಿಯಾಗಿದೆ.

ಹೌದು, ಕಳೆದ ಎರಡು ಆವೃತ್ತಿಗಳು ಜನಮನ್ನಣೆ ಪಡೆದು ಅತ್ಯಂತ ಯಶಸ್ವಿಯಾದ ಹಿನ್ನೆಲೆಯಲ್ಲಿ ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಜಿಲ್ಲಾಡಳಿತ ಈ ಬಾರಿಯ ಮಂಗಳೂರು ಸ್ಟ್ರೀಟ್ ಫುಡ್ ಫಿಯೆಸ್ಟ್ ನಡೆಸಲು ಸಜ್ಜಾಗಿದ್ದು ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಜಿಲ್ಲಾಡಳಿತದ ಸಹಕಾರದೊಂದಿಗೆ ಮೂರನೇ ಆವೃತ್ತಿ ಯ ಮಂಗಳೂರು ಸ್ಟ್ರೀಟ್ ಫುಡ್ ಫಿಯೆಸ್ಟ ಇದೇ 2025ರ ಜನವರಿ 18 ರಿಂದ 22 ರ ವರೆಗೆ ಐದು ದಿನಗಳ ಕಾಲ ನಡೆಯಲಿದೆ ಎಂದು ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ಗೌರವಾಧ್ಯಕ್ಷ ಗಿರೀಧರ್ ಶೆಟ್ಟಿ ತಿಳಿಸಿದ್ದಾರೆ.

ಇನ್ನು ಸದ್ಯ ಮಂಗಳೂರು(Mangaluru ) ಸ್ಟ್ರೀಟ್ ಫುಡ್ ಫಿಯೆಸ್ಟ್ ಸೀಸನ್ 3 ಜನವರಿ 18 ರಿಂದ 22ರವರೆಗೆ ನಡೆಯಲಿದೆ ಎನ್ನುವುದು ಖಚಿತವಾಗಿದೆ. ಪ್ರತಿದಿನ ಸಂಜೆ 4ರಿಂದ ರಾತ್ರಿ 10ರವರೆಗೆ ಕರಾವಳಿ ಉತ್ಸವ ಮೈದಾನದಿಂದ ನಾರಾಯಣ ಗುರು ವೃತ್ತ, ಮಣ್ಣಗುಡ್ಡ ಗುರ್ಜಿ ವೃತ್ತ, ಕೆನರಾ ಉರ್ವದವರೆಗೆ ಈ ಸ್ಟ್ರೀಟ್ ಫುಡ್ ಫಿಯೆಸ್ಟ್ ನಡೆಯಲಿದೆ. ಮಂಗಳೂರು ಸ್ಟ್ರೀಟ್ ಫುಡ್ ಫಿಯೆಸ್ಟ್ ಸೀಸನ್ 3ರ ಸಿದ್ಧತೆ ಭರದಿಂದ ಸಾಗುತ್ತಿದ್ದು, ಆನ್ ಲೈನ್ ಮೂಲಕ ನೂರಕ್ಕೂ ಅಧಿಕ ಸಂಖ್ಯೆಯ ಆಹಾರ ಮಳಿಗೆಗಳು ಈಗಾಗಲೇ ನೋಂದಾಯಿಸಿಕೊಂಡಿವೆ.