Mangaluru : ಮಂಗಳೂರಲ್ಲಿ ಮಸೀದಿ ಭೂಮಿ ಸಂಘರ್ಷ- ದೊಣ್ಣೆ ಹಿಡಿದು ನಡು ಬೀದಿಯಲ್ಲಿ ಕಿತ್ತಾಡಿದ ಮುಸ್ಲಿಂ ಕುಟುಂಬ ಮತ್ತು ಮಸೀದಿ ಆಡಳಿತ ಮಂಡಳಿ !!

Share the Article

Mangaluru : ಮಂಗಳೂರು ನಗರದ ಕದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಬಿಕರ್ನಕಟ್ಟೆಯ ಅಹ್ಸನುಲ್ ಮಸೀದಿಯಲ್ಲಿ ಮಸೀದಿಯ ಖಬರಸ್ತಾನದ ಭೂಮಿಯನ್ನು ಕಬಳಿಸಿದ ಆರೋಪದ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆದಿದೆ.

ಹೌದು, ಟಿಪ್ಪು ಸುಲ್ತಾನ್ ಕಾಲದ ಖಬರಸ್ತಾನ ಭೂಮಿ ಕಬಳಿಕೆ ಮಾಡಿರುವ ಆರೋಪ ಕೇಳಿಬಂದಿದ್ದು, ಮಸೀದಿ ಆಡಳಿತ ಮಂಡಳಿಯಿಂದ ಪ್ರತಿಭಟನೆ ಮಾಡಲಾಗಿದೆ. ಇದೇ ವೇಳೆ ಭೂಕಬಳಿಕೆ ಆರೋಪ ಹೊತ್ತ ಮಹಿಳೆ ಹಾಗೂ ಕುಟುಂಬದಿಂದ ರಂಪಾಟ ಮಾಡಲಾಗಿದ್ದು, ದೊಣ್ಣೆಯಿಂದ ದಾಳಿ ನಡೆಸಿ ಪ್ರತಿಭಟನಾಕಾರನ ಶರ್ಟ್ ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಸ್ಲಿಂ ಕುಟುಂಬದ ವಾದವೇನು?
ಹಲವು ವರ್ಷಗಳಿಂದ ಮಸೀದಿ ಪಕ್ಕದ 30 ಸೆಂಟ್ಸ್ ಜಾಗ ಖಬರಸ್ತಾನ ಆಗಿತ್ತು. ನೂರಾರು ವರ್ಷಗಳಿಂದ ಪೂರ್ವಜರ ಮೃತದೇಹ ದಫನ ಮಾಡಲಾಗಿದೆ. ನೂರಾರು ಮುಸ್ಲಿಂ ಕುಟುಂಬಗಳ ಶವ ಧಪನ ಮಾಡಿರುವ ಬಗ್ಗೆ ಉಲ್ಲೇಖಿಸಿದ್ದಾರೆ. ಆದರೆ ಅದು ದಫನ ಭೂಮಿ ಅಲ್ಲ, ನಮ್ಮ ಖಾಸಗಿ ಜಾಗವೆಂದು ಉಸ್ಮಾನ್ ಕುಟುಂಬ ಆರೋಪಿಸುತ್ತಿದೆ.

ಸಧ್ಯ 30 ಸೆಂಟ್ಸ್ ಜಾಗ ತಮ್ಮ ಹೆಸರಿನಲ್ಲೇ ಇರುವುದಾಗಿ ಉಸ್ಮಾನ್ ಕುಟುಂಬದ ವಾದವಾಗಿದ್ದು, ಆದರೆ ಜಾಗ ತಮ್ಮದು ಎಂದು ಮಸೀದಿ ಆಡಳಿತ ಮಂಡಳಿ ಹೇಳುತ್ತಿದೆ. ಹೊಡೆದಾಡಿಕೊಳ್ಳುವ ಹಂತಕ್ಕೂ ಮುಸ್ಲಿಂ ಕುಟುಂಬ ಹಾಗೂ ಮಸೀದಿ ಆಡಳಿತ ಮಂಡಳಿಯ ಕಿತ್ತಾಟ ತಲುಪಿದೆ.

Leave A Reply