Muniratna: ಶಾಸಕ ಮುನಿರತ್ನ ಅತ್ಯಾಚಾಕ್ಕೆ ಯತ್ನಿಸಿದ್ದು, ಏಡ್ಸ್ ಹರಡುವುದಾಗಿ ಟ್ರ್ಯಾಪ್ ಮಾಡಿದ್ದು ಎಲ್ಲವೂ ನಿಜ- SIT ತನಿಖೆಯಲ್ಲಿ ಬಯಲಾಯಿತು ರೋಚಕ ಸತ್ಯ

Muniratna: ಬಿಜೆಪಿ ಶಾಸಕ ಮುನಿರತ್ನ ಅವರು ಅತ್ಯಾಚಾರಕ್ಕೆ ಯತ್ನಿಸಿ, ಏಡ್ಸ್ ಹರಡುವುದಾಗಿ ಟ್ರ್ಯಾಪ್ ಮಾಡಿದ್ದ ಆರೋಪದಡಿ ಜೈಲು ಪಾಲಾಗಿದ್ದರು. ಬಳಿಕ ಜಾಮೀನಿನ ಮೇಲೆ ಹೊರ ಬಂದಿದ್ದರು. ಆದರೆ ಈಗ ಈ ಎಲ್ಲಾ ಆರೋಪಗಳು ನಿಜವೆಂದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ನಿರಂತರ ಅತ್ಯಾಚಾರ, ಅಪಾಯಕಾರಿ ರೋಗ ಹರಡುವಿಕೆ ಸೆಕ್ಷನ್ ಅಡಿ ಕೇಸ್ ದಾಖಲಿಸಿರುವಂತ ಎಸ್‌ಐಟಿ, ಜನಪ್ರತಿನಿಧಿಗಳ ನ್ಯಾಯಾಲಕ್ಕೆ ಚಾರ್ಜ್ ಶೀಟ್ ಕೂಡ ಸಲ್ಲಿಸಿದೆ.

 

ಯಸ್, ಸೆಪ್ಟೆಂಬರ್ ನಲ್ಲಿ ಬಿಜೆಪಿ(BJP) ಕಾರ್ಯಕರ್ತೆಯೊಬ್ಬರು ಕಗ್ಗಲೀಪುರ ಪೊಲೀಸ್ ಠಾಣೆಗೆ ಶಾಸಕ ಮುನಿರತ್ನ(Muniratna) ವಿರುದ್ಧ ಅತ್ಯಾಚಾರ ಆರೋಪ ಮಾಡಿ ದೂರು ನೀಡಿದ್ದರು. ತನ್ನ ಮೇಲೆ ಶಾಸಕ ಮುನಿರತ್ನ, ಸಹಚರರು ಅತ್ಯಾಚಾರ ಮಾಡಿದ್ದಾರೆ ಎಂಬುದಾಗಿ ಆರೋಪಿಸಿದ್ದರು. ಇದರ ಬೆನ್ನಲ್ಲೇ ರಾಮನಗರ ಪೊಲೀಸರು ಮುನಿರತ್ನ ಅವರನ್ನು ಕೋಲಾರದ ಬಳಿ ಬಂಧಿಸಿದ್ದರು. ಈ ಪ್ರಕರಣವನ್ನು ರಾಜ್ಯ ಸರ್ಕಾರ ಎಸ್‌ಐಟಿ ತನಿಖೆಗೆ ವಹಿಸಿತ್ತು. ತನಿಖೆ ನಡೆಸಿದ ಎಸ್ಐಟಿ ಇದೀಗ ಈ ಎಲ್ಲ ಆರೋಪಗಳು ನಿಜವೆಂದು ಹೇಳಿದೆ.

ಈ ಸಂಬಂಧ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿರುವಂತ ಎಸ್‌ಐಟಿ ಅಧಿಕಾರಿಗಳು, ಅದರಲ್ಲಿ ಐಪಿಸಿ 270ರ ಅಡಿಯಲ್ಲಿ ಪ್ರಕರಣ ದಾಖಲಿಸಿರುವ ಬಗ್ಗೆ ಉಲ್ಲೇಖಿಸಿದ್ದಾರೆ. ಇನ್ನೂ ಐಪಿಸಿ 354ಎ ಲೈಂಕಿಕ ಕಿರುಕುಳ, 354ಸಿ ಅನುಮತಿ ಇಲ್ಲದೇ ಮಹಿಳೆಯ ಅಶ್ಲೀಲ ದೃಶ್ಯಾವಳಿ ಚಿತ್ರೀಕರಣ, 376(2) ಎನ್ ನಿರಂತರ ಅತ್ಯಾಚಾರ, 308 ಸಂತ್ರಸ್ತೆಯ ಕೊಲ್ಲುವ ಉದ್ದೇಶ, 120ಬಿ ಅಪರಾಧಿಕ ಸಂಚು, 504 ಉದ್ದೇಶ ಪೂರ್ವಕ ಅವಮಾನ, 506 ಜೀವ ಬೆದರಿಕೆ, 270 ಅಪಾಯಕಾರಿ ರೋಗ ಹರಡುವಿಕೆ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ಸೇರಿದಂತೆ ಇತರೆ ಕಾಯ್ದೆಗಳ ಅಡಿಯಲ್ಲಿ ಆರೋಪ ಪಟ್ಟಿಯನ್ನು ಸಲ್ಲಿಸಿದೆ.

Leave A Reply

Your email address will not be published.