Home News Ramanagara: ಸಾಲ ಕೊಡಿಸುವುದಾಗಿ ಮಹಿಳೆಯನ್ನು ಲಾಡ್ಜ್ ಗೆ ಕರೆದೊಯ್ದು ರಾತ್ರಿ ಇಡೀ ಅತ್ಯಾಚಾರ – ಬಿಜೆಪಿ...

Ramanagara: ಸಾಲ ಕೊಡಿಸುವುದಾಗಿ ಮಹಿಳೆಯನ್ನು ಲಾಡ್ಜ್ ಗೆ ಕರೆದೊಯ್ದು ರಾತ್ರಿ ಇಡೀ ಅತ್ಯಾಚಾರ – ಬಿಜೆಪಿ ಮುಖಂಡ ಅರೆಸ್ಟ್

Hindu neighbor gifts plot of land

Hindu neighbour gifts land to Muslim journalist

Ramanagara: ಬಿಜೆಪಿ ಮುಖಂಡನೊಬ್ಬನ ವಿರುದ್ಧ ಅತ್ಯಾಚಾರದ ಆರೋಪ ಹೇಳಿ ಬಂದಿದ್ದು, ಸಾಲ‌ ಕೊಡಿಸುವುದಾಗಿ ಮಹಿಳೆಯನ್ನು ಲಾಡ್ಜ್​ಗೆ ಕರೆದುಕೊಂಡು ಹೋಗಿ, ಹಲ್ಲೆ ಮಾಡಿ ಅತ್ಯಾಚಾರ ನಿಸಗಿದ್ದಾನೆ ಎಂಬ ಆರೋಪದಡಿ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಹೌದು, ಬ್ಯೂಟಿಷನ್ ಕೆಲಸ ಮಾಡಿಕೊಂಡಿರುವ ವಿವಾಹಿತ ಮಹಿಳೆಗೆ ಸಾಲ ಕೊಡಿಸುವುದಾಗಿ ನಂಬಿಸಿ ರಾಮನಗರದ ಲಾಡ್ಜ್​ಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದ್ದು. ಮಹಿಳೆ ನೀಡಿದ ಈ ದೂರಿನ ಮೇರೆಗೆ ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಸೂರನಹಳ್ಳಿಯ ಬಿಜೆಪಿ ಮುಖಂಡ ಚಲುವರಾಮು ಎನ್ನುವರನ್ನು ಸಾತನೂರು ಪೊಲೀಸರು ಬಂಧಿಸಿದ್ದಾರೆ. ಇನ್ನು ಮತ್ತೊಬ್ಬ ಆರೋಪಿ ರವಿಗಾಗಿ ಶೋಧ ಕಾರ್ಯ ಕೈಗೊಂಡಿದ್ದಾರೆ.

ಮಹಿಳೆ ದೂರಿನಲ್ಲಿ ‘ತನ್ನ ಗಂಡನ ಕಾಗದ ಪತ್ರ ಸರಿಪಡಿಸಲು ಹಣದ ಅವಶ್ಯಕತೆ ಇತ್ತು. ಆಗ ಸಾಲ‌ ಕೊಡಿಸುವುದಾಗಿ ಚಲುವರಾಮು ಭರವಸೆ ನೀಡಿದ್ದರು. ಬಳಿಕ ಸಾಲ ಕೊಡುವವರು ಬರುತ್ತಿದ್ದಾರೆ ಬನ್ನಿ ಎಂದು ಲಾಡ್ಜ್ ಗೆ ಕರೆದುಕೊಂಡು ಹೋಗಿದ್ದು, ಸಾಲ ಕೊಡುವವರ ಕಚೇರಿ ಇಲ್ಲೇ ಇದೆ ಎಂದು ಹೇಳಿದ್ದ. ಬಳಿಕ ಮತ್ತು ಬರಿಸಿ ಲಾಡ್ಜ್​ನಲ್ಲಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ವೇಳೆ ತಡೆಯೊಡ್ಡಿದ್ದಕ್ಕೆ ಕಪಾಳಕ್ಕೆ ಹೊಡೆದಿದ್ದಾನೆ. ವಿಡಿಯೋ ಕಾಲ್ ಮಾಡಿ ನಗ್ನ ದೇಹ ತೋರಿಸುವಂತೆ ಬೆದರಿಕೆ ಹಾಕುತ್ತಿದ್ದ, ನಿನ್ನ ಖಾಸಗಿ ವಿಡಿಯೋ ಇದೆ. ಎಲ್ಲಾ ಕಡೆ ಹಾಕುತ್ತೇನೆ ಎಂದು ಬೆದರಿಕೆ ಹಾಕಿರುವುದಾಗಿ ಮಹಿಳೆ ಸಾತನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.