Mangaluru: ನಕಲಿ ಚಿನ್ನ ಅಡವಿಟ್ಟು ಕೋಟ್ಯಾಂತರ ರೂ, ವಂಚನೆ; ಮಂಗಳೂರು ಸಮಾಜ ಸೇವಾ ಬ್ಯಾಂಕ್‌ನಿಂದ ಸ್ಪಷ್ಟನೆ

Mangaluru: ನಕಲಿ ಚಿನ್ನ ಅಡವಿಟ್ಟು ವ್ಯಕ್ತಿಯೋರ್ವ ಎರಡು ಕೋಟಿಗೂ ಅಧಿಕ ಸಾಲವನ್ನು ಪಡೆದಿದ್ದು, ಬಂಟ್ವಾಳದಲ್ಲಿರುವ ಸಮಾಜ ಸೇವಾ ಸಹಕಾರಿ ಸಂಘಕ್ಕೆ ವಂಚನೆ ಮಾಡಿರುವ ಆರೋಪದ ಸುದ್ದಿಯೊಂದು ಇಂದು ಹರಿದಾಡಿತ್ತು. ಆದರೆ ಇದೀಗ ಬ್ಯಾಂಕ್‌ನ ಪ್ರಧಾನ ಕಚೇರಿಯು ಈ ಪ್ರಕರಣದ ಕುರಿತು ಸಮಾಜಿಯಿಷಿ ಸಂದೇಶ ನೀಡಿರುವ ಕುರಿತು ಮಾಧ್ಯಮವು ಪ್ರಕಟಣೆ ಮಾಡಿದೆ.

ಸಮಾಜ ಸೇವಾ ಸಹಕಾರಿ ಸಂಘವು ಉತ್ತಮ ಲಾಭದಲ್ಲಿ ನಡೆಯುತ್ತಿದೆ. ಇದನ್ನು ಸಹಿಸಲಾಗದೆ ಕೆಲವರು ಸಂಘ, ಸಂಘದ ಆಡಳಿತ ಮಂಡಳಿಯ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ನಮ್ಮ ಸಂಘದಲ್ಲಿ ಇಂತಹ ಒಂದು ಘಟನೆ ಆಗಿದೆ ಎಂದು ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಘಟನೆ ಬಗ್ಗೆ ನಾವು ಕಾನೂನು ರೀತಿಯಲ್ಲಿ ಕ್ರಮ ಕೈಗೊಂಡಿದ್ದೇವೆ. ಸಂಘದ ಆಡಳಿತ ಮಂಡಳಿಯ ಸಭೆ ಕರೆದು ಯಾರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ತೀರ್ಮಾನ ಮಾಡಲಾಗಿದೆ ಎಂದು ಸ್ಪಷ್ಟನೆಯನ್ನು ಟಿವಿ9 ಕನ್ನಡ ಮಾಧ್ಯಮಕ್ಕೆ ಸಂದೇಶ ಕಳುಹಿಸಿದೆ ಬ್ಯಾಂಕ್.‌

ಮುಂದೆ ಚುನಾವಣೆ ನಡೆಯಲಿದ್ದು, ಅದಕ್ಕಾಗಿ ಈ ಕೃತ್ಯಗಳನ್ನು ಮಾಡಲಾಗುತ್ತಿದ್ದು, ಇದಕ್ಕೆ ಮುಂದಿನ ದಿನಗಳಲ್ಲಿ ಕಾನೂನು ರೀತಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ನಮಗೆ ಪೊಲೀಸರ, ನ್ಯಾಯಾಲಯದ ಮೇಲೆ ಗೌರವ ಇದೆ ಎಂದು ಹೇಳಿದ್ದಾರೆ.

ಪುತ್ತೂರಿನ ಈಶ್ವರಮಂಗಲದ ಅಬೂಬಕ್ಕರ್‌ ಸಿದ್ದಿಕ್‌ ವ್ಯಕ್ತಿ ನಕಲಿ ಚಿನ್ನ ಅಡವಿಟ್ಟು ಎರಡು ಕೋಟಿಗಿಂತಲೂ ಹೆಚ್ಚು ಹಣ ಅಡವಿಟ್ಟು ಸಾಲ ಪಡೆದಿದ್ದು. ಇಲ್ಲಿ ಚಿನ್ನ ಪರೀಕ್ಷೆ ಮಾಡುವ ವ್ಯಕ್ತಿ, ಬ್ಯಾಂಕ್‌ನ ಅಧ್ಯಕ್ಷ, ಜನರಲ್‌ ಮ್ಯಾನೇಜರ್‌, ನಿರ್ದೇಶಕರು, ಬ್ಯಾಂಕ್‌ ಸಿಬ್ಬಂದಿಗಳ ಸಹಕಾರದ ಮೂಲಕ ಈ ಕೃತ್ಯ ನಡೆದಿದೆ ಎಂದು ಆರೋಪವಿದೆ.

ಈ ಕುರಿತು ಬ್ಯಾಂಕ್‌ನ ಸದಸ್ಯರು, ಮಾಜಿ ನಿರ್ದೇಶಕರಿಂದ ಮಂಗಳೂರಿನ ಸೆನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ, 28 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದು, ತನಿಖೆ ನಡೆಯುತ್ತಿದೆ.

Leave A Reply

Your email address will not be published.