Dhanaraj Achar: ಬಿಗ್ ಬಾಸ್ ಮನೆಯಲ್ಲಿ ಮಿಸ್ ಆಗಿ ಚಿಕನ್ ತಿಂದ ಧನರಾಜ್ ಆಚಾರ್ – ಗೊತ್ತಾದ ಬಳಿಕ ಒದ್ದಾಟ ಹೇಗಿದೆ ನೋಡಿ !!
Dhanaraj Achar: ತಮ್ಮ ಕುಟುಂಬದವರೊಂದಿಗೆ ಕಾಮಿಡಿ ವಿಡಿಯೋಗಳನ್ನು, ರಿಲ್ಸ್ ಗಳನ್ನು ಮಾಡುತ್ತಾ ನಾಡಿನ ಜನರನ್ನು ನಕ್ಕು ನಲಿಸಿದ ಕರಾವಳಿ ಹುಡುಗ ಧನರಾಜ್ ಆಚಾರ್(Dhanaraj Achar) ಅವರು ಸದ್ಯ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಯಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಈ ಮೂಲಕ ಅವರು ತಮ್ಮ ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದಾರೆ. ನಾಮಿನೇಷನ್ ಆದಾಗೆಲ್ಲ ಅವರನ್ನು ಅಭಿಮಾನಿಗಳು ಸೇವ್ ಮಾಡುತ್ತಿದ್ದಾರೆ. ಆದರೆ ಈಗ ದೊಡ್ಮನೆ ಒಳಗಡೆ ಧನರಾಜ್ ಆಚಾರ್ ಅವರು ಒಂದು ಎಡವಟ್ಟು ಮಾಡಿಕೊಂಡಿದ್ದಾರೆ.
View this post on Instagram
ಹೌದು, ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳಿಗೆ ರೆಸಾರ್ಟ್ ಟಾಸ್ಕ್ ನೀಡಲಾಗಿದೆ. ಈ ವೇಳೆ ಧನರಾಜ್ ಅವರು ಮಿಸ್ಸಾಗಿ, ಗೊತ್ತಿಲ್ಲದೆ ಚಿಕನ್ ಸೇವಿಸಿದ್ದಾರೆ. ಅದು ಗೊತ್ತಾದ ಬಳಿಕ ಅವರು ಆತಂಕ ಮಾಡಿಕೊಂಡಿದ್ದಾರೆ. ತಾವು ತಿನ್ನುತ್ತಿರುವುದು ಚಿಕನ್ ಎಂಬುದು ಧನರಾಜ್ ಅವರಿಗೆ ತಿಳಿದಿರಲಿಲ್ಲ. ‘ಅದು ಚಿಕನ್’ ಎಂದು ಭವ್ಯಾ ಗೌಡ ಅವರು ಖಚಿತಪಡಿಸಿದರು. ಅದು ತಿಳಿದ ಬಳಿಕ ಧನರಾಜ್ ಅವರ ಟೆನ್ಷನ್ ಜಾಸ್ತಿ ಆಗಿದೆ.
ಅಲ್ಲದೆ ತಾವು ತಿಂದಿದ್ದು ಚಿಕನ್ ಎಂಬುದು ಗೊತ್ತಾದ ಬಳಿಕ ಕೂಡಲೇ ಹೋಗಿ ಬಾಯಿ ತೊಳೆದುಕೊಂಡಿದ್ದಾರೆ. ಬಿಗ್ ಬಾಸ್ ಮನೆಯೊಳಗೆ ಧನರಾಜ್ ಅವರ ಗಲಿಬಿಲಿ ಕಂಡು ಭವ್ಯಾ ಗೌಡ, ರಜತ್, ಮೋಕ್ಷಿತಾ ಮುಂತಾದವರು ಬಿದ್ದು ಬಿದ್ದು ನಕ್ಕಿದ್ದಾರೆ.